ನವದೆಹಲಿ: ಜೂನ್ 21ರಂದು ಭಾರತವು ದಾಖಲೆಯ 88.09 ಲಕ್ಷ ಲಸಿಕೆ ಡೋಸ್ಗಳನ್ನು ತನ್ನ ನಾಗರಿಕರಿಗೆ ನೀಡಿತ್ತು. ಒಂದೇ ದಿನದಲ್ಲಿ ಇಷ್ಟು ಸಂಖ್ಯೆಯ ಲಸಿಕೆ ಡೋಸ್ ನೀಡಿದ್ದು ಇದೇ ಮೊದಲು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, “ಜೂನ್ 21ರ ಲಸಿಕೆ ಅಭಿಯಾನದಲ್ಲಿ ಲಸಿಕೆ ಪಡೆದವರಲ್ಲಿ ಐದನೇ ಮೂರರಷ್ಟು ಜನರು ಗ್ರಾಮೀಣ ಪ್ರದೇಶಕ್ಕೆ ಸೇರಿದವರು” ಎಂಬುದಾಗಿ ಹೇಳಿದ್ದಾರೆ.
ಜೂನ್ 21ರಂದು 88.09 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ ಎಂದಿರುವ ಅವರು, ಹೊಸ ಲಸಿಕೆ ನೀತಿ ಜಾರಿಗೆ ಬಂದ ಬಳಿಕ ಗ್ರಾಮೀಣ ಪ್ರದೇಶಗಳಲ್ಲಿ ಶೇ.64ರಷ್ಟು ಲಸಿಕೆ ನೀಡಲಾಗಿದೆ” ಎಂದಿದ್ದಾರೆ.
“ಭಾರತದ ಬಹುತೇಕ ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಸೋಮವಾರದ ಲಸಿಕೆ ಕಾರ್ಯಕ್ರಮದಲ್ಲಿ ಐದನೇ ಮೂರರಷ್ಟು ಜನರು ಗ್ರಾಮೀಣ ಭಾಗದವರು ಎಂಬುದು ನಮ್ಮ ಉತ್ಸಾಹ ಹೆಚ್ಚಾಗಲು ಕಾರಣವಾಗಿದೆ. ‘ಟೀಂ ಇಂಡಿಯಾ’ ಮನೋಭಾವದೊಂದಿಗೆ ಕೆಲಸ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನನ್ನ ಅಭಿನಂದನೆಗಳು” ಎಂದು ನಾಯ್ಡು ಟ್ವೀಟ್ ಮಾಡಿದ್ದಾರೆ.
“ಅತ್ಯುತ್ತಮವಾದ ರೀತಿಯಲ್ಲಿ ಲಸಿಕೆ ಅಭಿಯಾನವನ್ನು ನಡೆಸುತ್ತಿರುವ ರಾಜ್ಯಗಳು ತಮ್ಮ ಲಸಿಕಾ ವಿಧಾನವನ್ನು ಇತರ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು. ಜನರು ಕೂಡ ಆದಷ್ಟು ಬೇಗ ಲಸಿಕೆಯನ್ನು ಪಡೆದುಕೊಳ್ಳಲು ಮುಂದಾಗಬೇಕು” ಎಂದಿದ್ದಾರೆ.
यह विशेष संतोष का विषय है कि सोमवार से शुरू हुए नए टीकाकरण अभियान में हर 5 व्यक्तियों में से 3 ग्रामीण क्षेत्र से हैं जहां भारत की अधिकांश जनसंख्या बसती है। इस उपलब्धि के लिए केंद्र तथा राज्य सरकारों का अभिनंदन जिन्होंने टीम इंडिया की भावना से परस्पर सहयोग किया।
— Vice President of India (@VPSecretariat) June 23, 2021
जिन राज्यों ने सर्वश्रेष्ठ प्रदर्शन किया है वे अपनी पद्धति को अन्य राज्यों के साथ भी साझा करें जिससे बेहतर परिणाम मिल सकें। नागरिकों से अपील करता हूं कि वे टीका लगवाने के लिए खुद आगे आएं।
— Vice President of India (@VPSecretariat) June 23, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.