ನವದೆಹಲಿ: ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಶಿಪ್ಯಾರ್ಡ್ ಲಿಮಿಟೆಡ್ 4-5 ಫ್ಲೀಟ್ ಸಪೋರ್ಟ್ ಹಡಗುಗಳನ್ನು ನಿರ್ಮಿಸಲು ಭಾರತೀಯ ನೌಕಾಪಡೆಯೊಂದಿಗೆ ಮಾತುಕತೆ ನಡೆಸುತ್ತಿದೆ. ರೂ 18,000 ಕೋಟಿ ವೆಚ್ಚದ ಅಂದಾಜು ಮೊತ್ತದಲ್ಲಿ ಈ ಯೋಜನೆಯು ದೇಶದ ನೌಕಾ ಹಡಗುಗಳ ಸಂಖ್ಯೆಯನ್ನು ವಿಸ್ತರಿಸಲು ನೆರವಾಗಲಿದೆ.
ಪ್ರಸ್ತುತ, ನಿರ್ಮಾಣ ವೇಳಾಪಟ್ಟಿ, ಬೆಲೆ ಮತ್ತು ಇತರ ಷರತ್ತುಗಳ ಕುರಿತು ಮಾತುಕತೆ ನಡೆಯುತ್ತಿದೆ. ಈ ಬೃಹತ್ ಹಡಗು ನಿರ್ಮಾಣ ಆರ್ಡರ್ ಹಿಂದೂಸ್ಥಾನ್ ಶಿಪ್ಯಾರ್ಡ್ ಅನ್ನು ದೊಡ್ಡ ದೊಡ್ಡ ಶಿಪ್ಯಾರ್ಡ್ಗಳ ಸ್ಥಾನದಲ್ಲಿ ನಿಲ್ಲಿಸಲಿದೆ.
ಇದು ವರ್ಷದ ಅಂತ್ಯದ ವೇಳೆಗೆ ಆರ್ಡರ್ ಪ್ರಕ್ರಿಯೆ ಅಂತಿಮಗೊಳ್ಳುವ ನಿರೀಕ್ಷೆಯಿದೆ.
ರಕ್ಷಣಾ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿ ಫ್ಲೀಟ್ ಸಪೋರ್ಟ್ ಹಡಗುಗಳನ್ನು ನಿರ್ಮಿಸಲು ವಿಶಾಖಪಟ್ಟಣಂ ಮೂಲದ ಹಿಂದೂಸ್ಥಾನ್ ಶಿಪ್ಯಾರ್ಡ್ಗೆ ನಾಮಿನೇಶನ್ ಆಧಾರದ ಮೇಲೆ ಒಪ್ಪಂದವನ್ನು ನೀಡಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.