ಬೆಂಗಳೂರು: ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ ವಿವಿಧ ಯೋಜನೆಗಳಿಗೆ ಇಂದು ವೆರ್ಚುವಲ್ ಮೂಲಕ ಕೇಂದ್ರ ಪೆಟ್ರೋಲಿಯಂ ಹಾಗೂ ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರು ಚಾಲನೆ ನೀಡಿದರು.
ಮಂಗಳೂರಿನ ಎರಡು ಯೋಜನೆಗಳು ಸೇರಿದಂತೆ ಒಟ್ಟು ನಾಲ್ಕು ವಿವಿಧ ಯೋಜನೆಗಳಿಗೆ ಇಂದು ಹಸಿರು ನಿಶಾನೆ ತೋರಿಸಿದರು.
ದ. ಕ. ಸಂಸದ ನಳಿನ್ ಕುಮಾರ್ ಕಟೀಲ್ ರವರ ಮನವಿಯ ಮೇರೆಗೆ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯು ತನ್ನ ಸಿ.ಎಸ್.ಆರ್. ವತಿಯಿಂದ ಮೂಡಬಿದಿರೆಯ ಸರ್ಕಾರಿ ಆಸ್ಪತ್ರೆಗೆ 50 ಹಾಸಿಗೆಗಳನ್ನು ಒಟ್ಟು ರೂ. 18.00 ಲಕ್ಷ ವೆಚ್ಚದಲ್ಲಿ ನೀಡುವ ಕಾರ್ಯಕ್ರಮ ಹಾಗೂ ಮಂಗಳೂರಿನ ಕೆ.ಐ.ಒ.ಸಿ.ಎಲ್ ಪೆಲೆಟ್ ಪ್ಲಾಂಟ್ನ ಆಧುನೀಕರಣದ ಅಂಗವಾಗಿ ಸುಮಾರು ರೂ. 17.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬ್ಯಾರೆಲ್ ಟೈಪ್ ಬ್ಲೆಂಡರ್ ರೆಕ್ಲೈಮರ್ (Barrel Type Blender Reclaimer) ಅನ್ನು ಕೇಂದ್ರ ಸಚಿವರು ಉದ್ಘಾಟಿಸಿದರು.
ಕೋವಿಡ್ 19 ವೈರಾಣು ರೋಗದ ವಿರುದ್ದ ಹೋರಾಡುವ ನಿಟ್ಟಿನಲ್ಲಿ ನಳಿನ್ ಕುಮಾರ್ ಕಟೀಲ್ ರವರ ಮನವಿಯ ಮೇರೆಗೆ ಕುದುರೆಮುಖ ಕಂಪೆನಿಯು ತನ್ನ ಸಿ.ಎಸ್.ಆರ್. ವತಿಯಿಂದ ಈಗಾಗಲೇ ಜಿಲ್ಲಾಡಳಿತಕ್ಕೆ ಅಂಬುಲೆನ್ಸ್, ವೆಂಟಿಲೇಟರ್ ಸೇರಿದಂತೆ ಉಪ್ಪಿನಂಗಡಿ ಹಾಗೂ ಮೂಡಬಿದಿರೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 250LPM (ಲೀಟರ್ ಪರ್ ಮಿನಿಟ್) ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕವನ್ನು ನೀಡುತ್ತಿರುವುದಕ್ಕಾಗಿ ಕೇಂದ್ರ ಪೆಟ್ರೋಲಿಯಂ ಹಾಗೂ ಉಕ್ಕು ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಅಭಿನಂದಿಸಿದರು.
ಸಭೆಯಲ್ಲಿ ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಡಾ. ಸಿ.ಎನ್. ಆಶ್ವಥ ನಾರಾಯಣ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.