ಬೆಂಗಳೂರು: ಮೆಗಾ ಲಸಿಕಾ ಅಭಿಯಾನದ ಭಾಗವಾಗಿ ಕರ್ನಾಟಕ ಸೋಮವಾರ ಒಂದೇ ದಿನದಲ್ಲಿ 10.36 ಲಕ್ಷ ಡೋಸ್ ಲಸಿಕೆಗಳನ್ನು ತನ್ನ ಜನರಿಗೆ ನೀಡಿದೆ. 14.71 ಲಕ್ಷ ಡೋಸ್ಗಳನ್ನು ನೀಡಿದ ಮಧ್ಯಪ್ರದೇಶದ ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ.
ನಿನ್ನೆ ಒಂದು ದಿನದಲ್ಲಿ ಅತೀ ಹೆಚ್ಚು ಲಸಿಕೆ ಡೋಸ್ ನೀಡಿದ ದೇಶದ ಎರಡನೇ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಜಿಲ್ಲೆಗಳ ಪೈಕಿ ಬೆಂಗಳೂರು ನಗರವು 2,14,709 ಲಕ್ಷ ಲಸಿಕೆಗಳನ್ನು ನೀಡಿ ದೇಶದಲ್ಲೇ ಅಗ್ರಸ್ಥಾನದಲ್ಲಿದ್ದರೆ, ಮಧ್ಯಪ್ರದೇಶದಲ್ಲಿ ಇಂದೋರ್ 1.86 ಲಕ್ಷ ಡೋಸ್ ನೀಡಿ ಎರಡನೇ ಸ್ಥಾನ ಪಡೆದಿದೆ. ಸೋಮವಾರದ ಲಸಿಕಾ ಕಾರ್ಯಕ್ರಮದಲ್ಲಿ ರಾಜ್ಯವು ಏಳು ಲಕ್ಷ ಡೋಸ್ ಗುರಿಯನ್ನು ನಿಗದಿಪಡಿಸಿತ್ತು.
ನಿನ್ನೆ ನೀಡಲಾದ 10.36 ಲಕ್ಷ ಡೋಸ್ ಲಸಿಕೆಗಳ ಪೈಕಿ 1,62,78,437 ಜನರು ಅಂದರೆ ಏಳು ಕೋಟಿ ಜನಸಂಖ್ಯೆಯ 23.16% ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ ಮತ್ತು 33,07,968 ಜನರು ಎರಡನೇ ಡೋಸ್ ಪಡೆದಿದ್ದಾರೆ (ಒಟ್ಟು ಜನಸಂಖ್ಯೆಯ 4.7%). ಸೋಮವಾರ ಸಂಜೆ 7:41 ರ ಹೊತ್ತಿಗೆ ಕರ್ನಾಟಕದಾದ್ಯಂತ 10,36,523 ಡೋಸ್ಗಳನ್ನು ನೀಡಲಾಗಿದೆ.
📢 Karnataka stood second in the entire country in the nationwide Vaccine Maha Abhiyan today. The State administered 10.36 lakh doses in a single day today (till 7 pm). Total doses administered in the State to date are 1.96 Crore.@narendramodi @drharshvardhan @BSYBJP pic.twitter.com/opbtnQ16Ru
— Dr Sudhakar K (@mla_sudhakar) June 21, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.