ನವದೆಹಲಿ: ದೇಶದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ದೆಹಲಿ, ಮಹಾರಾಷ್ಟ್ರ, ಉತ್ತರಪ್ರದೇಶ ಮುಂತಾದ ರಾಜ್ಯಗಳು ಅತ್ಯಾಚಾರ, ಮಹಿಳಾ ದೌರ್ಜನ್ಯದಿಂದಾಗಿ ಸದಾ ಸುದ್ದಿಯಲ್ಲಿರುತ್ತದೆ. ಆದರೆ ನಮ್ಮ ದೇಶದಲ್ಲಿ ಮಹಿಳೆಯರಿಗೆ ಸುರಕ್ಷಿತವಾದ ರಾಜ್ಯವೂ ಇದೆ ಎಂಬುದನ್ನು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ವರದಿ ತಿಳಿಸಿದೆ.
ಈ ವರದಿಯ ಪ್ರಕಾರ ಕೇಂದ್ರಾಡಳಿತ ಪ್ರದೇಶಗಳಾದ ನಾಗಾಲ್ಯಾಂಡ್, ಲಕ್ಷಾದೀಪ, ಪುದುಚೆರಿ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ರಾಜ್ಯಗಳು.
ನ್ಯಾಗಾಲ್ಯಾಂಡ್ನಲ್ಲಿ 2014ರಲ್ಲಿ ಮಹಿಳೆಯರ ವಿರುದ್ಧದ 67 ಪ್ರಕರಣಗಳು ಮಾತ್ರ ದಾಖಲಾಗಿದೆ. ಇಲ್ಲಿ ಶೇ.6ರಷ್ಟು ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತದೆ. ಲಕ್ಷದೀಪದಲ್ಲಿ ಶೇ.10ರಷ್ಟು ಮಹಿಳಾ ದೌರ್ಜನ್ಯಗಳು ದಾಖಲಾಗಿವೆ. ಇಲ್ಲಿ 2014ರಲ್ಲಿ 4 ಪ್ರಕರಣಗಳು ಮಾತ್ರ ವರದಿಯಾಗಿವೆ. ಪುದುಚೇರಿಯಲ್ಲಿ ಶೇ.10.6ರಷ್ಟು ಮಹಿಳಾ ದೌರ್ಜನ್ಯಗಳು ನಡೆದಿವೆ.
ದಾದ್ರ ಮತ್ತು ನಗರ್ ಹವೇಲಿ, ದಾಮನ್ ಮತ್ತು ದಿಯು, ಮನೀಪುರ, ಮೇಘಾಲಯ, ಉತ್ತರಾಖಂಡಗಳಲ್ಲೂ ಅತಿ ಕಡಿಮೆ ಪ್ರಮಾಣದಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯಗಳಾಗುತ್ತವೆ.
ಜಯಲಲಿತಾ ಅವರ ಆಡಳಿತವಿರುವ ತಮಿಳುನಾಡು ಕೂಡ ಮಹಿಳೆಯರಿಗೆ ಸುರಕ್ಷಿತ ರಾಜ್ಯವಾಗಿದೆ. ಇಲ್ಲಿ 2014ರಲ್ಲಿ 6325ಪ್ರಕರಣಗಳು ದಾಖಲಾಗಿವೆ. ಆದರೆ ಇಲ್ಲಿನ ಒಟ್ಟು ಮಹಿಳಾ ಜನಸಂಖ್ಯೆಗೆ ಹೋಲಿಸಿದರೆ 18.6ರಷ್ಟು ಮಾತ್ರ ಮಹಿಳಾ ದೌರ್ಜನ್ಯಗಳು ನಡೆಯುತ್ತವೆ.
ಮಹಿಳಾ ಜನಸಂಖ್ಯೆಯ ಪ್ರಮಾಣದಲ್ಲಿ ಶೇ.31.3ರಷ್ಟು ಮಹಿಳೆಯರು ಬಿಹಾರದಲ್ಲಿ ದೌರ್ಜನ್ಯಕ್ಕೊಳಗಾಗಿದ್ದಾರೆ. ಆದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ಬಿಹಾರ ಮಹಿಳೆಯರಿಗೆ ಸೇಫ್ ಎಂಬುದು ವರದಿಯಿಂದ ತಿಳಿದು ಬಂದಿದೆ.
ಉತ್ತರಪ್ರದೇಶ, ದೆಹಲಿಯಲ್ಲಿ ಅತೀ ಹೆಚ್ಚು ಮಹಿಳಾ ದೌರ್ಜನ್ಯಗಳಾಗುತ್ತಿದ್ದು, ಇದು ಮಹಿಳೆಯರಿಗೆ ಸೇಫ್ ರಾಜ್ಯವಲ್ಲ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.