ನವದೆಹಲಿ: ಗಣಕಯಂತ್ರಗಳಿಗೆ ಸಾಮಾನ್ಯವಾಗಿ ವಿಂಡೋಸ್ ಎಕ್ಸ್ಪಿ, ವಿಂಡೋಸ್ 7 ಅಥವಾ 8 ಬಳಸಲಾಗುತ್ತಿದೆ. ಆದರೆ ಮೈಕ್ರಾಸಾಫ್ಟ್ ಇತ್ತೀಚೆಗೆ ಬಿಡುಗಡೆಗೊಳಿಸಿದ ವಿಂಡೋಸ್ 10ನಿಂದ ನಾವು ಡೌನ್ಲೋಡ್ ಮಾಡಲಾಗುವ ಕಂಪ್ಯೂಟರ್ ಆಟಗಳು ಮತ್ತಿತರ ಸಾಫ್ಟ್ವೇರ್ಗಳಲ್ಲಿರುವ ವೈರಸ್ ಅನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ.
ಇದರಿಂದ ಈ ವೈರಸ್ಗಳನ್ನು ಪತ್ತೆ ಹಚ್ಚಿ ಅಪ್ಲಿಕೇಷನ್ಗಳನ್ನು ತೆಗೆದು ಹಾಕುವ ಮೂಲಕ ಕಂಪ್ಯೂಟರ್ಗೆ ಆಗುವ ಹಾನಿಯನ್ನು ತಡೆಯಬಹುದು. ಯಾವುದೇ ಅಪ್ಲಿಕೇಷನ್ ಡೌನ್ಲೋಡ್ ಮಾಡುವ ಸಂದರ್ಭ ಅದರಿಲ್ಲಿರುವ ವೈರಸ್ ಪತ್ತೆ ಹಚ್ಚಲು, ಅಪ್ಡೇಟ್ ಮಾಡಲು ಇಲ್ಲವೇ ಯಾವುದೇ ಅನಧಿಕೃತ ಹಾರ್ಡ್ವೇರ್ ಉಪಕರಣಗಳನ್ನು ಬಳಸಿದಲ್ಲಿ ಎಚ್ಚರಿಕೆ ನೀಡುವಲ್ಲಿ ವಿಂಡೋಸ್ ೧೦ ಸಹಕಾರಿಯಾಗಿದೆ.
ಇದು ಎಕ್ಸ್ ಬಾಕ್ಸ್ ಕಂಟ್ರೋಲರ್, ಯಾವುದೇ ಅನಧಿಕೃತ ಮೈಕ್ರಾಸಾಫ್ಟ್ ಆಫೀಸ್ ಫೈಲ್ಗಳನ್ನು ಸ್ಕ್ಯಾನ್ ಮಾಡುತ್ತದೆ. ಆದರೆ ಮೈಕ್ರಾಸಾಫ್ಟ್ ಈವರೆಗೆ ಇದಲ್ಲಿರುವ ಇಯುಎಲ್ಎ(EULA) ಕುರಿತು ಯಾವುದೇ ವಿವರಣೆ ನೀಡಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.