ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟು ಮಾಡುವ ನಿರೀಕ್ಷೆಯಲ್ಲಿರುವ ಇಫ್ಕೋ ಸಂಸ್ಥೆ ಉತ್ಪಾದಿಸಿರುವ ನ್ಯಾನೋ ಯೂರಿಯಾದ ಮೊದಲ ಕಂತು ಗುಜರಾತಿನ ಕಲೋಲ್ ಸ್ಥಾವರದಿಂದ ರಾಜ್ಯಕ್ಕೆ ರವಾನೆಯಾಗಿದೆ.
ನ್ಯಾನೋ ಯೂರಿಯಾಗಳನ್ನು ಹೊತ್ತ ವಾಹನಗಳಿಗೆ ಚಾಲನೆ ನೀಡಿದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಈಗಾಗಲೇ ಮೂರು ಕಡೆಗಳಲ್ಲಿ ಇಪ್ಕೋದ ನ್ಯಾನೋ ಯೂರಿಯಾ ಘಟಕಗಳಿದ್ದು, ಇನ್ನೂ ನಾಲ್ಕು ಕಡೆಗಳಲ್ಲಿ ಘಟಕ ಆರಂಭವಾಗಲಿದೆ. ರಾಜ್ಯದಲ್ಲಿಯೂ ಈ ಘಟಕ ಸ್ಥಾಪಿಸಲು ಸಂಸ್ಥೆ ಆಸಕ್ತಿ ತೋರಿದ್ದು, ಕೆಲವೇ ದಿನಗಳಲ್ಲಿ ಸ್ಥಳ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.
ನ್ಯಾನೋ ರಸಗೊಬ್ಬರ ಬಳಕೆಯಿಂದ ಸಾಗುವಳಿ ವೆಚ್ಚದಲ್ಲಿ ಸುಮಾರು 15% ಕಡಿಮೆಯಾಗುತ್ತದೆ. ಹಾಗೆಯೇ ಇಳುವರಿ ಸಹ 15% – 20% ಗಳಷ್ಟು ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಇದು ರೈತಾಪಿ ವರ್ಗಕ್ಕೆ ಹೆಚ್ಚಿನ ಲಾಭ ತಂಡುಕೊಡುವ ಸಾಧ್ಯತೆ ಇದೆ. 240 ರೂ. ಗಳಿಗೆ ದೊರೆಯುವ 500 ಎಂ ಎಲ್ ನ್ಯಾನೋ ಯೂರಿಯಾವು 45 ಕೆಜಿ ಮಾಮೂಲಿ ಯೂರಿಯಾಗೆ ಸಮನಾಗಿರಲಿದೆ ಎಂದು ಸಂಸ್ಥೆ ತಿಳಿಸಿದೆ.
ಇದರ ಬಳಕೆಯಿಂದ ಮಾಮೂಲಿ ರಸಗೊಬ್ಬರ ಬಳಕೆಯಲ್ಲಿ ಗಣನೀಯ ಮಟ್ಟದ ಇಳಿಕೆ ಕಾಣಬಹುದು. ದೇಶದಲ್ಲಿ ಸುಮಾರು 600 ಕೋಟಿ ರೂ. ಗಳಷ್ಟು ಸಬ್ಸಿಡಿ ಉಳಿತಾಯಕ್ಕೂ ಇದು ಸಹಕಾರಿಯಾಗಲಿದೆ. ಇದು ಮಣ್ಣಿನ ಫಲವತ್ತತೆ ಕಾಪಾಡುವ ಜೊತೆಗೆ ಸಾಗಾಟ ವೆಚ್ಚ, ಸಾಗುವಳಿಯಲ್ಲಿಯೂ ಖರ್ಚು ಕಡಿಮೆ ಮಾಡಿ ರೈತರಿಗೆ ಅನುಕೂಲ ಒದಗಿಸಲಿದೆ. ಇದೀಗ ರಾಜ್ಯಕ್ಕೂ ನ್ಯಾನೋ ಯೂರಿಯಾ ಬಂದಿದ್ದು, ಆ ಮೂಲಕ ರಾಜ್ಯದ ರೈತರಿಗೂ ನಷ್ಟ ಕಡಿಮೆ ಮಾಡಿ, ಲಾಭ ಹೆಚ್ಚಿಸುವ ಸಾಧ್ಯತೆಗಳನ್ನು ಸಹ ಅಲ್ಲಗಳೆಯುವಂತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.