News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಂಗ್ಲಾದಿಂದ ಭಾರತಕ್ಕೆ ಆಗಮಿಸುತ್ತಿದ್ದ ಚೀನಿ ಗುಪ್ತಚರನ ಬಂಧನ

ಕೋಲ್ಕತ್ತಾ: ಪಶ್ಚಿಮಬಂಗಾಳದ  ಮಾಲ್ಡಾ ಜಿಲ್ಲೆಯ ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಭಾರತೀಯ ಭೂಪ್ರದೇಶಕ್ಕೆ ಅಕ್ರಮವಾಗಿ ದಾಟಲು ಯತ್ನಿಸುತ್ತಿದ್ದ ಶಂಕಿತ ಚೀನಾದ ಗೂಢಚಾರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುರುವಾರ ಬಂಧಿಸಿದೆ.

36 ವರ್ಷದ ಹಾನ್ ಜುನ್ವೆ ಎಂದು ಗುರುತಿಸಲ್ಪಟ್ಟ  ವ್ಯಕ್ತಿಯ ಬಂಧನವಾಗಿದ್ದು,  ಚೀನಾದ ಹುಬೈಗೆ ಸೇರಿದವನು. ಈತ ಜೂನ್ 2 ರಂದು ಬಾಂಗ್ಲಾದೇಶವನ್ನು ಪ್ರವೇಶಿಸಿದ್ದಾನೆ ಎನ್ನಲಾಗಿದೆ.

ಅರೆಸೇನಾ ಪಡೆ ಹೊರಡಿಸಿದ ಹೇಳಿಕೆಯ ಪ್ರಕಾರ, ಚೀನಾದ ಗುಪ್ತಚರ ಸಂಸ್ಥೆಯ ಪರವಾಗಿ ಭಾರತದಲ್ಲಿ ಕೆಲಸ ಮಾಡಲು ಈತ ಮುಂದಾಗಿದ್ದು, ಹೀಗಾಗಿ ಈತನ ಬಂಧನ ದೊಡ್ಡ ಸಾಧನೆಯಾಗಿದೆ.

ಚೀನಾದ ಬಂಧಿತ ವ್ಯಕ್ತಿ ಮತ್ತು ಆತನ ಪತ್ನಿಯ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರಕರಣವಿದೆ. ಇವರು ಗುರುಗ್ರಾಮ್‌ನಲ್ಲಿ “ಸ್ಟಾರ್ ಸ್ಪ್ರಿಂಗ್” ಹೆಸರಿನ ಹೋಟೆಲ್ ಹೊಂದಿದ್ದಾರೆ ಮತ್ತು ನಾಲ್ಕು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ ಎಂಬುದು ತಿಳಿದು ಬಂದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top