ಬೆಂಗಳೂರು: ಇದೇ ಪ್ರಪ್ರಥಮ ಬಾರಿಗೆ ವಿದೇಶದಿಂದ 100 ಟನ್ ಶೈತ್ಯೀಕರಿಸಿದ ತಾಜಾ ಹಣ್ಣುಗಳನ್ನು ಭಾರತೀಯ ರೈಲ್ವೆ ಕಂಟೇನರ್ಗಳ ಮೂಲಕ ಬೆಂಗಳೂರಿಗೆ ತಲುಪಿಸಿದೆ.
ಆಪಲ್, ಕಿವಿ, ಏಪ್ರಿಕಾಟ್ಸ್, ಚೆರ್ರಿ ಹಣ್ಣುಗಳನ್ನು ನೆರೆಯ ರಾಷ್ಟ್ರಗಳಾದ ಬ್ರೆಜಿಲ್, ಇರಾನ್, ಯುರೋಪ್ಗಳಿಂದ ಆಮದು ಮಾಡಿ ಮುಂಬೈಗೆ ತರಿಸಿ ಬಳಿಕ ಅದನ್ನು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಇನ್ಲ್ಯಾಂಡ್ ಕಂಟೇನರ್ ಡಿಪೋಗೆ ತಲುಪಿಸಿದೆ. ರೈಲ್ವೆ ಅಡಿಯಲ್ಲಿರುವ ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. ನಿಂದ ನಿರ್ವಹಿಸಲಾಗುವ ರೀಫರ್ ಸ್ಪೆಷಲ್ನಲ್ಲಿ 44 ಶೈತ್ಯೀಕರಣ ಕಂಟೇನರ್ಗಳ ಮೂಲಕ ತಲಾ 23 ಟನ್ಗಳಂತೆ ಹಣ್ಣುಗಳನ್ನು ತುಂಬಿ ಬೆಂಗಳೂರಿಗೆ ರೈಲ್ವೆ ಯಾರ್ಡ್ನಿಂದ ಸಾಗಿಸಲಾಗಿತ್ತು.
ಈ ವಿಶೇಷ ರೈಲು ಜೂನ್ 8 ರಂದು ಹೊರಟು ಜೂನ್ 10 ರ ಬೆಳಗ್ಗೆ 10.40 ಕ್ಕೆ ವೈಟ್ಫೀಲ್ಡ್ಗೆ ತಲುಪಿದೆ. ಪ್ರಾಯೋಗಿಕವಾಗಿ ಈ ಪ್ರಯತ್ನ ನಡೆಸಲಾಗಿದ್ದು, ಅದು ಯಶಸ್ವಿಯಾಗಿದೆ. ದಕ್ಷಿಣ ಭಾರತದಲ್ಲಿ ವಿದೇಶದಿಂದ ಆಮದು ಮಾಡಿಕೊಂಡ ಹಣ್ಣುಗಳಿಗೆ ಭಾರೀ ಬೇಡಿಕೆ.ಇದ್ದು, ಈ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ರೈಲ್ವೆ ಈ ವಿನೂತನ ಪ್ರಯೋಗ ನಡೆಸಿದೆ ಎಂದು ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.