ನವದೆಹಲಿ: ಪ್ರಯಾಣಿಕರಿಗೆ ಗಾಲಿಕುರ್ಚಿಗಳ ಬುಕಿಂಗ್ ಮಾಡಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ಕಾರ್ಪೋರೇಶನ್ (ಐಆರ್ಸಿಟಿಸಿ)ಯು ಉಚಿತ ಆನ್ಲೈನ್ ಸೇವೆಯನ್ನು ಆರಂಭಿಸಿದ್ದು, ಇದು ದೆಹಲಿಯಲ್ಲಿ ಈಗಾಗಲೇ ಆರಂಭಗೊಂಡಿದೆ.
ವಯಸ್ಕರು, ನಿಶ್ಷಕ್ತರು, ಅಂಗವಿಕಲರಿಗಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಈ ಸೇವೆಯನ್ನು ತಮ್ಮ ಟಿಕೆಟ್ ಬುಕ್ಕಿಂಗ್ ಸಂದರ್ಭ ಆನ್ಲೈನ್ನಲ್ಲಿ ಪಡೆಯಬಹುದು ಎಂದು ಐಆರ್ಸಿಟಿಸಿ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ಮನೋಚಾ ಹೇಳಿದ್ದಾರೆ.
ಸದ್ಯ ಈ ಸೇವೆಯನ್ನು ಪರೀಕ್ಷಾರ್ಥವಾಗಿ ದೆಹಲಿ ರೈಲು ನಿಲ್ದಾಣದಲ್ಲಿ ಕಾರ್ಯಾಚರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರ ರೈಲು ನಿಲ್ದಾಣಗಳಲ್ಲೂ ಅಳವಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ರೈಲು ನಿಲ್ದಾಣದಲ್ಲಿ ಈ ಸೇವೆಯನ್ನು ಗರಿಷ್ಠ ೧ ಗಂಟೆಗಳ ಕಾಲ ಪಡೆಯಬಹುದಾಗಿದೆ. ಈ ಸೇವೆಯನ್ನು ಪಡೆಯಲು ಪ್ರಯಾಣಿಕರು ತಮ್ಮ ವೋಟರ್ ಕಾರ್ಡ್, ಆಧಾರ್ ಇಲ್ಲವೇ ಪಾನ್ ಕಾರ್ಡ್ನ ಜೊತೆಗೆ ೫೦೦ ರೂ. ಠೇವಣಿ ಇಡಬೇಕಾಗುತ್ತದೆ. ಗಾಲಿ ಕುರ್ಚಿ ಹಿಂಪಡೆವ ಸಂದರ್ಭ ಇದನ್ನು ಮರಳಿ ನೀಡಲಾಗುವುದು.
ಈ ಗಾಲಿಕುರ್ಚಿಗಳ ಸೇವೆ ಪಡೆಯಲು ಯಾವುದೇ ವಯೋಮಿತಿ ಇಲ್ಲ. ಮೀಸಲಾತಿ ಟಿಕೆಟ್ ಬುಕ್ಕಿಂಗ್ ಜೊತೆಗೆ ಈ ಗಾಲಿಕುರ್ಚಿಗಳನ್ನೂ ಬುಕ್ಕಿಂಗ್ ಮಾಡಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.