ನವದೆಹಲಿ: ರಿಟರ್ನ್ಸ್ ಸಲ್ಲಿಸುವ ಮತ್ತು ತೆರಿಗೆ ಪಾವತಿ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುವ ಸಲುವಾಗಿ ಆದಾಯ ತೆರಿಗೆ ಇಲಾಖೆಯು ಹೊಸ ಇ-ಫೈಲಿಂಗ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ.
www.incometax.gov.in ಮೂಲಕ ತೆರಿಗೆದಾರರು ನವೀಕರಿಸಿದ ಪೋರ್ಟಲ್ ಅನ್ನು ಪ್ರವೇಶಿಸಬಹುದು, ಇದು ಅನೇಕ ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಿದೆ.
ಆದರೆ, ತೆರಿಗೆದಾರರು ಈಗ ಮತ್ತೊಮ್ಮೆ ತಮ್ಮ ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರವನ್ನು (ಡಿಎಸ್ಸಿ) ನೋಂದಾಯಿಸಿಕೊಳ್ಳಬೇಕು ಮತ್ತು ಮೊಬೈಲ್ ಸಂಖ್ಯೆಗಳೊಂದಿಗೆ ತಮ್ಮ ಇ-ಮೇಲ್ ವಿಳಾಸವನ್ನು ನವೀಕರಿಸಬೇಕಾಗುತ್ತದೆ.
ತೆರಿಗೆ ವೃತ್ತಿಪರರು, ವೈಯಕ್ತಿಕ, ಕಂಪನಿ, ಕಂಪನಿಯೇತರ ಮುಂತಾದ ಹಲವಾರು ವರ್ಗದ ತೆರಿಗೆದಾರರಿಗೆ ವಿಭಿನ್ನ ಟ್ಯಾಬ್ಗಳನ್ನು ಇದರಲ್ಲಿ ರಚಿಸಲಾಗಿದೆ.
ಬಳಕೆದಾರರಿಗೆ ತಮ್ಮ ಕುಂದುಕೊರತೆಗಳನ್ನು ಪೋರ್ಟಲ್ನಲ್ಲಿ ಮೀಸಲಾಗಿರುವ ಮೆನುವಿನಲ್ಲಿ ನೋಂದಾಯಿಸಲು ಸಹ ಸಾಧ್ಯವಾಗಲಿದೆ.
ಹೊಸ ಸೈಟ್ ತೆರಿಗೆದಾರರಿಗೆ ಪ್ರಶ್ನೆಗಳನ್ನು ಕೇಳಲು, ಸೂಚನೆಗಳನ್ನು ನೀಡಲು, ಪ್ರತಿಕ್ರಿಯೆಗಳನ್ನು ಸ್ವೀಕರಿಸಲು ಮತ್ತು ಆಯಾ ಡ್ಯಾಶ್ಬೋರ್ಡ್ಗಳಲ್ಲಿ ಮೇಲ್ಮನವಿ ಮತ್ತು ಮೌಲ್ಯಮಾಪನಗಳಂತಹ ಅಂತಿಮ ಆದೇಶಗಳನ್ನು ತಿಳಿಯಲು ಅನುವು ಮಾಡಿಕೊಡುತ್ತದೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.