ಬೆಂಗಳೂರು: ನಗರದ ಮೆಟ್ರೋ ರೈಲು ಯೋಜನೆಯ ಹಂತ 2 ಎ ಮತ್ತು 2 ಬಿ ಯ ಅನುಮೋದನೆ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿರುವುದಾಗಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದ್ದಾರೆ.
ಈ ಯೋಜನೆಯು ಇತರ ನಗರ ಸಾರಿಗೆ ವ್ಯವಸ್ಥೆಗಳ ಜೊತೆಗೆ ಸಮರ್ಥ ಮತ್ತು ಪರಿಣಾಮಕಾರಿ ರೀತಿಯಲ್ಲಿ ಏಕೀಕರಣವನ್ನು ಒಳಗೊಂಡಿರುತ್ತದೆ. ಬೆಂಗಳೂರಿನ ನಗರ ಸಾರಿಗೆ ವ್ಯವಸ್ಥೆಯನ್ನು ಸಹ ಸುಗಮಗೊಳಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ, ಹೆಬ್ಬಾಳ ಜಂಕ್ಷನ್ ಮಾರ್ಗವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗೆ ಒಟ್ಟು 58.19 ಕಿಮೀ ಉದ್ದದ ರೈಲು ಯೋಜನೆ ಇದಾಗಿದೆ. ಇದರ ಕಾಮಗಾರಿಗಳನ್ನು 14,788 ಕೋಟಿ ರೂ. ಗಳನ್ನು ಬಳಕೆ ಮಾಡಿ ನಡೆಸಲಾಗುತ್ತಿದೆ. ಈ ಯೋಜನೆಗೆ ಅಂಗೀಕಾರ ದೊರೆತ 5 ವರ್ಷಗಳ ಒಳಗಾಗಿ ಈ ಯೋಜನೆ ಸಂಪೂರ್ಣವಾಗಲಿದೆ ಎಂದು ಸದಾನಂದ ಗೌಡ ತಿಳಿಸಿದ್ದಾರೆ.
The Sanction Order of #Bangalore Metro Rail Project Phase 2A & 28 has been issued today.
The project involves integration with other urban transport systems in an efficient and effective manner and will streamline the city’s urban transportation system.#BangaloreMetro pic.twitter.com/QWfkm2jiT4
— Sadananda Gowda (@DVSadanandGowda) June 7, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.