ನವದೆಹಲಿ: ಬಿಹಾರದ ಅರಹದಲ್ಲಿ ನಡೆದ ಸಮಾರಂಭದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಬಿಹಾರಕ್ಕೆ ಬರೋಬ್ಬರಿ 1.5 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಜನತೆಗೆ ನೀಡಿದ ಭರವಸೆಯನ್ನು ಅವರು ಉಳಿಸಿಕೊಂಡಿದ್ದಾರೆ. ಬಿಹಾರ ಹಲವಾರು ವರ್ಷಗಳಿಂದ ವಿಶೇಷ ಪ್ಯಾಕೇಜ್ಗಾಗಿ ಬೇಡಿಕೆಯಿಡುತ್ತಾ ಬಂದಿದ್ದು, ಇದೀಗ ಆ ಬೇಡಿಕೆ ಈಡೇರಿದೆ.
ಈ ವೇಳೆ ಮಾತನಾಡಿದ ಮೋದಿ, ‘ಕೇಂದ್ರದಿಂದ ವಿವಿಧ ಮೂಲಗಳಿಂದ ಬಿಹಾರಕ್ಕೆ ಅನುದಾನಗಳು ಬರುತ್ತಿವೆ, ಇದೀಗ ಇಲ್ಲಿಗೆ ಬರುವ ಅನುದಾನದ ಮೌಲ್ಯ 1.65 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರ ಬಿಮಾರು ರಾಜ್ಯವಲ್ಲ ಎಂದಿದ್ದಾರೆ. ಆದರೂ ಅವರು ಕೇಂದ್ರದ ಸಹಾಯಯಾಚನೆ ಮಾಡುತ್ತಿದ್ದಾರೆ. ರೋಗವಿಲ್ಲದವರು ವೈದ್ಯರ ಬಳಿ ಹೋಗುತ್ತಾರೆಯೇ? ಎನ್ನುವ ಮೂಲಕ ಮೋದಿ ನಿತೀಶ್ಗೆ ಟಾಂಗ್ ನೀಡಿದರು.
ಲೋಕಸಭಾ ಚುನಾವಣೆಯ ವೇಳೆ ಮೋದಿ ಬಿಹಾರಕ್ಕೆ 50 ಸಾವಿರ ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದರು. ಆದರೀಗ ಅದನ್ನು 1.5 ಲಕ್ಷ ಕೋಟಿಗೆ ಏರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.