ನವದೆಹಲಿ: ಭಾರತದ ಎಂಎಸ್ಎಂಇ ವಲಯವನ್ನು ಉತ್ತೇಜಿಸುವ ಸಲುವಾಗಿ ವಿಶ್ವ ಬ್ಯಾಂಕ್ ಯುಎಸ್ಡಿ 500 ಮಿಲಿಯನ್ ಕಾರ್ಯಕ್ರಮವನ್ನು ಅನುಮೋದಿಸಿದೆ. ಈ ಕಾರ್ಯಕ್ರಮವು 5 ಲಕ್ಷ 50 ಸಾವಿರ ಎಂಎಸ್ಎಂಇಗಳ ಕಾರ್ಯಕ್ಷಮತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ದೇಶದ ಸುಮಾರು 58 ದಶಲಕ್ಷ ಎಂಎಸ್ಎಂಇಗಳ ಪೈಕಿ ಶೇಕಡಾ 40 ಕ್ಕಿಂತ ಹೆಚ್ಚು ಔಪಚಾರಿಕ ಹಣಕಾಸು ಮೂಲಗಳಿಗೆ ಪ್ರವೇಶವನ್ನು ಹೊಂದಿಲ್ಲ. ಎಂಎಸ್ಎಂಇ ವಲಯವು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಭಾರತದ ಜಿಡಿಪಿಯ 30 ಪ್ರತಿಶತ ಮತ್ತು ರಫ್ತಿನ 40 ಪ್ರತಿಶತದಷ್ಟಿದೆ.
ಯುಎಸ್ಡಿ 500 ಮಿಲಿಯನ್ ಮೈಕ್ರೋ, ಸ್ಮಾಲ್ ಆಂಡ್ ಮೀಡಿಯಂ ಎಂಟರ್ಪ್ರೈಸ್ ಪರ್ಫಾರ್ಮೆನ್ಸ್ (RAMP) ಕಾರ್ಯಕ್ರಮವು ಈ ವಲಯದಲ್ಲಿ ವಿಶ್ವ ಬ್ಯಾಂಕಿನ ಎರಡನೇ ಸಹಾಯವಾಗಿದೆ. ಈ ಮೊದಲು 750 ಮಿಲಿಯನ್ ಎಂಎಸ್ಎಂಇ ತುರ್ತು ಪ್ರತಿಕ್ರಿಯೆ ಕಾರ್ಯಕ್ರಮ ಕಳೆದ ವರ್ಷ ಜುಲೈನಲ್ಲಿ ಅನುಮೋದನೆ ಪಡೆದಿತ್ತು.
“ಭಾರತದ ಆರ್ಥಿಕತೆಯ ನಿರ್ಣಾಯಕ ಬೆನ್ನೆಲುಬಾಗಿರುವ ಎಂಎಸ್ಎಂಇ ವಲಯವು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ತತ್ತರಿಸಿದೆ. RAMP ಪ್ರೋಗ್ರಾಂ ಹಣಕಾಸು ಮಾರುಕಟ್ಟೆಗಳನ್ನು ಬಲಪಡಿಸುವ ಮೂಲಕ MSME ಗಳಿಗೆ ಹಣಕಾಸು ಮತ್ತು ಕಾರ್ಯ ಬಂಡವಾಳಕ್ಕೆ ಉತ್ತಮ ಪ್ರವೇಶವನ್ನು ಒದಗಿಸುತ್ತದೆ. ವಿಳಂಬವಾದ ಪಾವತಿಗಳ ಸಮಸ್ಯೆಯನ್ನು ಪರಿಹರಿಸಲು ಇದು ಆನ್ಲೈನ್ ವಿವಾದ ಪರಿಹಾರದ ಕಾರ್ಯವಿಧಾನಗಳನ್ನು ಹೆಚ್ಚಿಸುತ್ತದೆ” ಎಂದು ವಿಶ್ವಬ್ಯಾಂಕ್ ದೇಶದ ನಿರ್ದೇಶಕ ಜುನೈದ್ ಅಹ್ಮದ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.