ಬೆಂಗಳೂರು: ಕೊಡಗು ಜಿಲ್ಲೆಯ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ಆಮ್ಲಜನಕ ಪರಿವರ್ತಿತ ಘಟಕ ಸ್ಥಾಪನೆಯಾಗುತ್ತಿದೆ.
ಮುಂದಿನ 15 ದಿನಗಳಲ್ಲಿ ಪ್ರತಿನಿತ್ಯ 1 ಟನ್ಗಳಷ್ಟು ಆಮ್ಲಜನಕ ಪರಿವರ್ತಿಸುವ ಘಟಕಗಳು ಸಿದ್ಧವಾಗಲಿದೆ. ಇದರಿಂದ 100 ಬೆಡ್ಗಳಷ್ಟು ಕೊರೋನಿ ರೋಗಿಗಳಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತದೆ. ಘಟಕ ಆರಂಭವಾದ ಬಳಿಕ ಇದು ನಿರಂತರವಾಗಿ ಕಾರ್ಯ ನಿರ್ವಹಿಸಲಿದೆ.
ಮಡಿಕೇರಿಗೆ ಸಂಬಂಧಿಸಿದಂತೆ ಈ ಆಸ್ಪತ್ರೆ ತೀವ್ರ ಮತ್ತು ಮಧ್ಯಮ ಸ್ವರೂಪದ ಸೋಂಕಿತರಿಗೆ ಚಿಕಿತ್ಸೆ ನೀಡುವ ಏಕೈಕ ಕೇಂದ್ರ ಇದಾಗಿತ್ತು. ಆ ಬಳಿಕ ವಿರಾಜಪೇಟೆ ಮತ್ತು ಸೋಮವಾರ ಪೇಟೆ ತಾಲೂಕುಗಳಲ್ಲಿ ಕೊರೋನಾ ಕೇರ್ ಸೆಂಟರ್ಗಳನ್ನು ತೆರೆಯಿತು. 1 ಕೋಟಿ ರೂ. ವೆಚ್ಚದಲ್ಲಿ ಇದೀಗ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟಕ ಸ್ಥಾಪನೆಯಾಗುತ್ತಿದೆ.
ಇದು ರಾಜ್ಯದಲ್ಲೇ ಮೊದಲನೆಯ ಮತ್ತು ಒಮ್ಮೆ ಸ್ಥಾಪಿಸಿದ ನಂತರ ಆಮ್ಲಜನಕ ಕೊರತೆಗೆ ಸಮರ್ಪಕ ಪರಿಹಾರವಾಗಬಲ್ಲ ಘಟಕವಾಗಿ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಜಂಬೋ ಆಕ್ಸಿಜನ್ ಸಿಲಿಂಡರ್ ಕೊರತೆಯಿಂದ ಸ್ಥಗಿತಾಗಿರುವ 50 ಹಾಸಿಗೆಗಳ ವಿರಾಜಪೇಟೆ ಆಸ್ಪತ್ರೆಯನ್ನು 98 ಹಾಸಿಗೆಗಳಿಗೆ ಪರಿವರ್ತನೆ ಮಾಡಿ, ಅದನ್ನು ಈ ಘಟಕದ ಜೊತೆಗೆ ಸಂಪರ್ಕಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.