ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ಜೊತೆಗೆ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಸಹ ಉಲ್ಬಣವಾಗಿದ್ದು, ಇದರ ಚಿಕಿತ್ಸೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಇಂದು 9750 ವಯಲ್ಸ್ ಆಂಪೋಟೆರಿಸಿನ್ ಬಿ ಔಷಧಿ ಹಂಚಿಕೆ ಮಾಡಿದೆ.
ಈ ಸಂಬಂಧ ಮಾಹಿತಿ ನೀಡಿರುವ ಕೇಂದ್ರ ಸೊಚಿವ ಡಿ ವಿ ಸದಾನಂದ ಗೌಡ, ಕೇಂದ್ರ ಸರ್ಕಾರ ಬ್ಲ್ಯಾಕ್ ಫಂಗಸ್ ಸೋಂಕಿತರ ಚಿಕಿತ್ಸೆಗೆ ಇಂದು 9750 ವಯಲ್ಸ್ ಅಂಪೋಟೆರಿಸಿನ್ ಬಿ ಔಷಧವನ್ನು ಪೂರೈಸಿರುವುದಾಗಿ ಹೇಳಿದ್ದಾರೆ.
ಇಂದು ಕರ್ನಾಟಕಕ್ಕೆ ಹೆಚ್ಚುವರಿ 9750 ವಯಲ್ಸ್ ಅಂಪೋಟೆರಿಸಿನ್ ಬಿ ಔಷಧ ಹಂಚಿಕೆ ಮಾಡಲಾಗಿದ್ದು, ಆ ಮೂಲಕ ರಾಜ್ಯಕ್ಕೆ ಈವರೆಗೆ 22460 ವಯಲ್ಸ್ ಅಂಪೋಟೆರಿಸಿನ್ ಬಿ ಔಷಧವನ್ನು ಪೂರೈಕೆ ಮಾಡಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಈ ವರೆಗೆ ಎಲ್ಲಾ ರಾಜ್ಯಗಳಿಗೂ ಸಂಬಂಧಿಸಿದಂತೆ 121000 ವಯಲ್ಸ್ ಅಂಪೋಟೆರಿಸಿನ್ ಬಿ ಔಷಧವನ್ನು ಕೇಂದ್ರ ಸರ್ಕಾರ ಪೂರೈಸಿರುವುದಾಗಿ ಅವರು ತಿಳಿಸಿದ್ದಾರೆ.
ಕಪ್ಪುಶಿಲೀಂದ್ರ ರೋಗದ ಚಿಕಿತ್ಸೆಗಾಗಿ ಕೇಂದ್ರವು ಇಂದು ವಿವಿಧ ರಾಜ್ಯಗಳಿಗೆ ಹೆಚ್ಚುವರಿಯಾಗಿ 1,21,000 ವಯಲ್ಸ್ #Amphotericin_B ಹಂಚಿಕೆ ಮಾಡಿದ್ದು ಕರ್ನಾಟಕಕ್ಕೆ 9750 ವಯಲ್ಸ್ ಒದಗಿಸಲಾಗಿದೆ.
ರಾಜ್ಯಕ್ಕೆ ಇದುವರೆಗೆ 22,460 ವಯಲ್ಸ್ #Amphotericin_B ಚುಚ್ಚುಮದ್ದು ದೊರೆತಂತಾಗಿದ್ದು ಇದರ ಹಂಚಿಕೆ ಪ್ರಕ್ರಿಯೆ ಮುಂದುವರಿಯಲಿದೆ https://t.co/HfiBTage7m— Sadananda Gowda (@DVSadanandGowda) June 4, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.