ನವದೆಹಲಿ: ಹಿರಿಯ ನಾಗರಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್ಚಂದ್ ಗೆಹ್ಲೋಟ್ ಇಂದು SAGE ಎಂಬ ಪೋರ್ಟಲ್ ಅನ್ನು ಪ್ರಾರಂಭಿಸಿದ್ದಾರೆ.
SAGE ಅಥವಾ ಸೀನಿಯರ್ ಕೇರ್ ಏಜಿಂಗ್ ಗ್ರೋತ್ ಎಂಜಿನ್ ಯೋಜನೆಯನ್ನು ವಿಶ್ವಾಸಾರ್ಹ ಸ್ಟಾರ್ಟ್ ಅಪ್ಗಳ ಮೂಲಕ ಹಿರಿಯರ ಆರೈಕೆ ಉತ್ಪನ್ನಗಳು ಮತ್ತು ಸೇವೆಗಳು ‘ಒನ್ ಸ್ಟಾಪ್ ಅಸೆಸ್’ ಆಯ್ಕೆಯಲ್ಲಿ ಸಿಗುವಂತೆ ಮಾಡುವುದನ್ನು ಬೆಂಬಲಿಸಲು ಮತ್ತು ರಚಿಸಲು ಸ್ಥಾಪಿಸಲಾಗಿದೆ.
ನವೀನ ಉತ್ಪನ್ನಗಳು ಮತ್ತು ಸೇವೆಗಳ ಆಧಾರದ ಮೇಲೆ ಸ್ಟಾರ್ಟ್ ಅಪ್ ಗಳನ್ನು ಆಯ್ಕೆ ಮಾಡಲಾಗುವುದು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹೇಳಿದೆ. ಇದರ ಮೂಲಕ ಆರೋಗ್ಯ, ವಸತಿ, ಆರೈಕೆ ಕೇಂದ್ರಗಳಂತಹ ಕ್ಷೇತ್ರಗಳಲ್ಲಿ ಹಿರಿಯರಿಗೆ ನೆರವು ಒದಗಿಸಲು ಸಾಧ್ಯವಾಗಲಿದೆ, ಹಣಕಾಸು, ತಾಂತ್ರಿಕ ಪ್ರವೇಶ, , ಆಹಾರ ಮತ್ತು ಸಂಪತ್ತು ನಿರ್ವಹಣೆ ಮತ್ತು ಕಾನೂನು ಮಾರ್ಗದರ್ಶನವನ್ನೂ ಇದು ಒಳಗೊಂಡಿದೆ.
ಈ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರು ರಾಮದಾಸ್ ಅಠಾವಲೆ ಮತ್ತು ರತ್ತನ್ ಲಾಲ್ ಕಟಾರಿಯಾ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.