ಮೈಸೂರು: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಹಿರೇನಹಳ್ಳಿಯ 70 ವರ್ಷದ ವೃದ್ಧರೊಬ್ಬರು ತಾವು ಉಳಿತಾಯ ಮಾಡಿಟ್ಟಿದ್ದ 10 ಸಾವಿರ ಪಿಂಚಣಿ ಹಣವನ್ನು ಸೋಂಕಿತರಿಗಾಗಿ ಬಳಕೆ ಮಾಡಲು ಕೊರೋನಾ ಕೇರ್ ಸೆಂಟರ್ಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ತಹಶೀಲ್ದಾರ್ ಶಿವಮೂರ್ತಿ ಅವರಿಗೆ ಈ ಹಣವನ್ನು ವೃದ್ಧೆ ಶಾರದಮ್ಮ ಎಂಬವರು ಹಸ್ತಾಂತರ ಮಾಡಿದ್ದಾರೆ. ಇದನ್ನು ಬಳಕೆ ಮಾಡಿ ಸೋಂಕಿತರಿಗೆ ತಿನಿಸುಗಳನ್ನು ನೀಡುವಂತೆ ಅವರು ಮನವಿ ಮಾಡಿದ್ದಾರೆ. ಇವರ ಈ ಕಾರ್ಯ ಇದೀಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಕೊರೋನಾ ಮೊದಲನೇ ಅಲೆಯ ಸಂದರ್ಭದಲ್ಲಿಯೂ ಶಾರದಮ್ಮ ಅವರು ಕೊರೋನಾ ಸೋಂಕಿತರಿಗಾಗಿ ತಾವು ಕೂಡಿಟ್ಟ 10 ಸಾವಿರ ರೂ. ಗಳನ್ನು ನೀಡಿದ್ದರು. ಪ್ರೀತಿ ಹಾಗೂ ಸೇವಾ ಮನೋಭಾವದ ಮೂಲಕ ಸಹಾಯ ಒದಗಿಸಿರುವ ಶಾರದಮ್ಮ ಅವರ ಕಾರ್ಯಕ್ಕೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.