ಬೆಂಗಳೂರು: ಕೆಎಸ್ಆರ್ಟಿಸಿ ಎಂಬ ಪದ ಕೇರಳಕ್ಕೆ ಎಂಬ ತೀರ್ಪಿನ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿವ ಲಕ್ಷ್ಮಣ್ ಸವದಿ ಅವರು, ಈ ಪದವನ್ನು ಕೇರಳ ಸಾರಿಗೆ ಮೊದಲು ಬಳಸಿದ್ದು ಎಂಬುದರ ಆಧಾರದ ಮೇಲೆ ಈ ತೀರ್ಪು ಬಂದಿದೆ. ಆ ತೀರ್ಪಿನಲ್ಲೇನಿದ ಎಂಬ ಅಂಶಗಳ ಕುರಿತು ಸಂಪೂರ್ಣ ಮಾಹಿತಿ ದೊರೆತ ಬಳಿಕ ಮುಂದಿನ ನಡೆಯ ಬಗ್ಗೆ ತಿಳಿಸುವುದಾಗಿ ಹೇಳಿದ್ದಾರೆ.
ನಮ್ಮದು ಒಕ್ಕೂಟ ವ್ಯವಸ್ಥೆಯಾಗಿದ್ದು, ಒಂದು ರಾಜ್ಯ, ಮತ್ತೊಂದು ರಾಜ್ಯದ ಜೊತೆಗೆ ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ವ್ಯವಸ್ಥೆ ಹೇಳುತ್ತದೆ. ಈ ವಿವಾದ ಅನಗತ್ಯವಾಗಿ ಎದ್ದಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಜನಸೇವೆಯೇ ಮುಖ್ಯ. ಉಭಯ ರಾಜ್ಯಗಳ ಸಾರಿಗೆಗಳೂ ಸೇವಾ ಮನೋಭಾವದ ಜೊತೆಗೇ ಕೆಲಸ ಮಾಡುತ್ತಿವೆ. ಹೀಗಾಗಿ ಉಭಯ ರಾಜ್ಯಗಳು ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಬಾರದು ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಹೆಸರಿದ್ದರೆ ಕೇರಳಕ್ಕೆ ಅದರಿಂದೇನೂ ನಷ್ಟ ಇಲ್ಲ. ಕರ್ನಾಟಕ ಸಾರಿಗೆ ಕೇರಳದ ಜೊತೆಗೆ ಯಾವುದೇ ಪೈಪೋಟಿ ಸಹ ನಡೆಸುತ್ತಿಲ್ಲ. ಆದ್ದರಿಂದ ಕೇರಳ ಇದನ್ನು ಸಂಭ್ರಮ ಎಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ. ಈ ವಿಚಾರವನ್ನು ಕೇರಳ ಸಹ ಅರಿತುಕೊಳ್ಳಬೇಕು. ಅನಗತ್ಯ ವಿವಾದ ಸೃಷ್ಟಿಸಬಾರದು. ಬಾಂಧವ್ಯ ವೃದ್ಧಿಗೆ ಇಂತಹ ಅನಗತ್ಯ ವಿವಾದ ಮಾರಕ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.