ಬೆಂಗಳೂರು: ಕೋವಿಡ್ ನೋವು, ಸಂಕಷ್ಟದ ಜೊತೆಗೆ ಮಾನವೀಯತೆಯ ಪಾಠವನ್ನು ಕಲಿಸಿದೆ. ಹಲವು ಕುಟುಂಬಗಳು ತಮ್ಮವರನ್ನ ಕಳೆದುಕೊಂಡು ಆಘಾತದಲ್ಲಿವೆ. ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿಗಳನ್ನು ಸಂಬಂಧಿಗಳು ತೆಗೆದುಕೊಂಡು ಹೋಗದೆ ಚಿತಾಗಾರದಲ್ಲಿ ಹಾಗೇ ಉಳಿದುಕೊಂಡಿದ್ದವು. ಅವುಗಳನ್ನು ವಿಸರ್ಜನೆ ಮಾಡುವ ಮೂಲಕ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಕಂದಾಯ ಇಲಾಖೆ ಮಾದರಿ ಕೆಲಸವೊಂದನ್ನು ಮಾಡಿದೆ.
ಕುಟುಂಬಸ್ಥರು ಅಸ್ಥಿಗಳನ್ನು ತೆಗೆದುಕೊಂಡು ಹೋಗದ ಕಾರಣ ಸರ್ಕಾರವೇ ಆ ಸ್ಥಾನದಲ್ಲಿ ನಿಂತು ಆ ಅಸ್ಥಿಗಳಿಗೆ ಗೌರವಪೂರ್ವಕ ಹಾಗೂ ವಿಧಿವತ್ತಾದ ಮುಕ್ತಿ ನೀಡಿದೆ. ಇಂದು ಅಂತಹ ಐದು ನೂರಕ್ಕೂ ಅಧಿಕ ಜನರ ಅಸ್ಥಿಯನ್ನ ಕಾವೇರಿ ನದಿಯಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ವಿಸರ್ಜನೆ ಮಾಡಲಾಯಿತು. ಕಂದಾಯ ಸಚಿವನಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಎಂದು ಅಶೋಕ್ ತಿಳಿಸಿದ್ದಾರೆ.
ಕೋವಿಡ್ ನೋವು, ಸಂಕಷ್ಟದ ಜೊತೆಗೆ ಮಾನವೀಯತೆಯ ಪಾಠವನ್ನು ಕಲಿಸಿದೆ. ಹಲವು ಕುಟುಂಬಗಳು ತಮ್ಮವರನ್ನ ಕಳೆದುಕೊಂಡು ಆಘಾತದಲ್ಲಿವೆ. ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿಗಳನ್ನು ಸಂಬಂಧಿಗಳು ತೆಗೆದುಕೊಂಡು ಹೋಗದೆ ಚಿತಾಗಾರದಲ್ಲಿ ಹಾಗೇ ಉಳಿದುಕೊಂಡಿದ್ದವು. ಆದರೆ ಅವರ್ಯಾರು ಅನಾಥರಲ್ಲ. pic.twitter.com/VqezYgfUy4
— R. Ashoka (@RAshokaBJP) June 2, 2021
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಮಳವಳ್ಳಿ ಶಾಸಕ ಡಾ ಕೆ ಅನ್ನದಾನಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.