ಬೆಂಗಳೂರು: ಅವಶ್ಯಕತೆ ಇರುವವರಿಗೆ ಆಹಾರ ವಿತರಿಸುವ ನೆಪದಲ್ಲಿ ಜನರು ತಮ್ಮ ಸ್ವಂತ ವಾಹನಗಳನ್ನು ರಸ್ತೆಗೆ ಇಳಿಸಬಾರದು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಸರಕು ವಾಹನಗಳ ಬಳಕೆ ಅಥವಾ ವಿತರಣಾ ಸಂಸ್ಥೆಗಳ ಮೂಲಕ ಆಹಾರ ಕಿಟ್ಗಳನ್ನು ವಿತರಿಸುವಂತೆ ಸೂಚಿಸಿದ್ದಾರೆ. ಆಹಾರ ವಿತರಣೆಯ ನೆಪದಲ್ಲಿ ಕೆಲವರು ಅನಗತ್ಯ ಓಡಾಟ ನಡೆಸುವುದು, ತಮ್ಮ ವಾಹನಗಳನ್ನು ರಸ್ತೆಗಿಳಿಸುವುದು ಕಂಡುಬರುತ್ತದೆ. ಇದನ್ನು ಕ್ಷಮಿಸುವುದು ಅಸಾಧ್ಯ. ಹಲವು ವಾಹನಗಳನ್ನು ಸಹ ಈಗಾಗಲೇ ಸೀಜ್ ಮಾಡಿದ್ದಾರೆ.
ಬಡವರಿಗೆ, ಅಶಕ್ತರಿಗೆ ಆಹಾರ ವಿತರಿಸಲು ಸರಕು ವಾಹನಗಳ ಬಳಕೆಗೆ ಯಾವುದೇ ಅಡ್ಡಿಯಿಲ್ಲ. ಈಗಾಗಲೇ ಅನೇಕ ಸಂಸ್ಥೆಗಳು ಸಹ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಆದರೆ ಸ್ವಂತ ವಾಹನಗಳನ್ನು ಮಾತ್ರ ಬೀದಿಗೆ ಇಳಿಸುವಂತಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.