ಬೆಂಗಳೂರು: ನೀರಿನ ಸಂರಕ್ಷಣೆ ಕುರಿತ ಕಾರ್ಯಗಾರ, ಸಂಶೋಧನೆ ಸೇರಿ ಹತ್ತಾರು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿರುವ ಬೆಂಗಳೂರು ಪರಿಸರವಾದಿ ವಿದ್ಯಾರ್ಥಿಯೊಬ್ಬರು ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ನಗರದ ಪಿಇಎಸ್ ವಿವಿಯ ವಿದ್ಯಾರ್ಥಿನಿ ಎಂ ಎಸ್ ಗಾರ್ವಿತಾ ಗುಲ್ಹಾಟಿ ಅವರನ್ನು ಸಾಮಾಜಿಕ ಉದ್ಯಮಶೀಲತೆಗಾಗಿ ಫೋರ್ಬ್ಸ್ ನ 30 ವರ್ಷಗಳೊಳಗಿನ ಉದ್ಯಮಿಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ.
2017-21 ನೇ ಬ್ಯಾಚ್ನ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ವಿದ್ಯಾರ್ಥಿಯಾಗಿರುವ ಅವರು ನೀರಿನ ಸಂರಕ್ಷಣೆ, ಸಂಶೋಧನೆ ಸೇರಿದಂತೆ ಇನ್ನೂ ಹಲವು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಗರ್ವಿತಾ ಅವರು ಯುವಜನತೆಯ ತಂಡವನ್ನು ಕಟ್ಟಿ ನೀರಿನ ಸಂರಕ್ಷಣೆ ಸಂಬಂಧ ಕಾರ್ಯಾಗಾರ ಮಾಡುತ್ತಿದ್ದರು. 2015 ರಲ್ಲಿ ಆರಂಭವಾದ ಇವರ ಅಭಿಯಾನ ಈ ವರೆಗೂ 10 ಲಕ್ಷಕ್ಕೂ ಅಧಿಕ ಜನರನ್ನು ತಲುಪಿದೆ.ಇವರ ಈ ಸಾಮಾಜಿಕ ಕಳಕಳಿಗೆ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಸಹ ಬೆಂಬಲ ನೀಡಿತ್ತು.
ಕಳೆದ ವರ್ಷ ವೇಲ್ಸ್ ರಾಜಕುಮಾರಿಯ ಗೌರವಾರ್ಥ ಪ್ರತಿಷ್ಠಿತ ಡಯಾನಾ ಪ್ರಶಸ್ತಿಯನ್ನು ಗರ್ವಿತಾ ಪಡೆದುಕೊಂಡಿದ್ದರು. ಇವರ ಈ ಸಮಾಜಮುಖಿ ಸೇವೆಗೆ ಸಾನ್ ಮೆಂಡಿಸ್ ಫೌಂಡೇಶನ್ ಸಹ ಈ ಹಿಂದೆ ಪ್ರಚಾರ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.