ನವದೆಹಲಿ: ಗೋವಾದ ನೌಕಾ ವಾಯುನೆಲೆ ಐಎನ್ಎಸ್ ಹಂಸ್ಸಾದಲ್ಲಿ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್)ನಲ್ಲಿ ಆನ್ಬೋರ್ಡ್ ಮೆಡಿಕಲ್ ಇಂಟೆನ್ಸಿವ್ ಕೇರ್ ಯೂನಿಟ್ (ಎಂಐಸಿಯು) ಅನ್ನು ಅಳವಡಿಸಲಾಗಿದೆ.
ಪ್ರತಿಕೂಲವಾದ ಹವಾಮಾನದಲ್ಲಿ ಗಂಭೀರ ಸ್ಥಿತಿಯಲ್ಲಿ ಇರುವ ರೋಗಿಗಳನ್ನು ಏರ್ಲಿಫ್ಟ್ ಮಾಡಲು ಈ ವ್ಯವಸ್ಥೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಭಾರತೀಯ ನೌಕಾಪಡೆಯ ಹೇಳಿಕೆಯ ಪ್ರಕಾರ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವತಿಯಿಂದ ಐಎನ್ಎಸ್ ಹನ್ಸಾದ ಎಎಲ್ಹೆಚ್ ಎಂಕೆ -3 ರಲ್ಲಿ ಎಂಐಸಿಯು ಅನ್ನು ಸ್ಥಾಪಿಸಲಾಗಿದೆ.
ಎಲ್ಲಾ ಹವಾಮಾನದಲ್ಲಾ ಕಾರ್ಯಾಚರಿಸಬಲ್ಲ ಏರ್ಕ್ರಾಫ್ಟ್ ಎಎಲ್ಹೆಚ್ ಎಂಕೆ -3 ರಲ್ಲಿ ಎಂಐಸಿಯು ಅಳವಡಿಸಲಾಗಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸಹ ಭಾರತೀಯ ನೌಕಾಪಡೆಯು ಗಂಭೀರ ರೋಗಿಗಳನ್ನು ವಾಯು ಮಾರ್ಗದ ಮೂಲಕ ವೈದ್ಯಕೀಯ ಉದ್ದೇಶಕ್ಕಾಗಿ ಸ್ಥಳಾಂತರ ಮಾಡಬಹುದಾಗಿದೆ.
ವಿಮಾನವನ್ನು ಏರ್ ಆಂಬುಲೆನ್ಸ್ ಆಗಿ ಪರಿವರ್ತಿಸಲು ಎರಡು-ಮೂರು ಗಂಟೆಗಳಲ್ಲಿ ಉಪಕರಣಗಳನ್ನು ಅಳವಡಿಸಬಹುದು ಎಂದು ಅದು ಹೇಳಿದೆ.
ಎಚ್ಎಎಲ್ನಿಂದ ಭಾರತೀಯ ನೌಕಾಪಡೆಗೆ ತಲುಪಿಸಲಾದ ಎಂಟು ಎಂಐಸಿಯು ಸೆಟ್ಗಳಲ್ಲಿ ಇದು ಮೊದಲನೆಯದು ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.