ಬೆಂಗಳೂರು: ಕೊರೋನಾ ನಿರ್ವಹಣೆ, ವ್ಯಾಕ್ಸಿನೇಷನ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಡೀ ದೇಶದಲ್ಲೇ ಕರ್ನಾಟಕ 6 ನೇ ಸ್ಥಾನದಲ್ಲಿದೆ.
ವ್ಯಾಕ್ಸಿನೇಷನ್ ಪ್ರಕ್ರಿಯೆ ಆರಂಭವಾದಂದಿನಿಂದ ಈ ವರೆಗೆ ಸುಮಾರು 1.3 ಕೋಟಿ ಡೋಸ್ಗಳಷ್ಟು ಲಸಿಕೆ ನೀಡುವ ಮೂಲಕ ರಾಜ್ಯ ಆರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ರಾಜ್ಯವು ಈ ವರೆಗೆ 2.1 ಕೋಟಿ ಡೋಸ್ ಗಳನ್ನು ನೀಡಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣಗಳಂತಹ ರಾಜ್ಯಗಳು ಇನ್ನೂ ಒಂದು ಕೋಟಿಯ ಗಡಿಯನ್ನೂ ದಾಟಿಲ್ಲ.
ಈವರೆಗೆ 18 – 44 ವರ್ಷದ ಒಳಗಿನವರಲ್ಲಿ ಸುಮಾರು 8.5 ಲಕ್ಷ ಜನರಿಗೆ ಕರ್ನಾಟಕ ಮೊದಲ ಡೋಸ್ ಲಸಿಕೆ ನೀಡಿದೆ. ಶನಿವಾರ ಒಂದೇ ದಿನದಲ್ಲಿ ಈ ವಯಸ್ಸಿನ 1,06,668 ಜನರಿಗೆ ಕೊರೋನಾ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಜನವರಿ ತಿಂಗಳಲ್ಲಿ ಲಸಿಕೆಯ ಮೇಲಿದ್ದ ಅಭಿಪ್ರಾಯಕ್ಕಿಂತ ಭಿನ್ನ ಸಕಾರಾತ್ಮಕ ಅಭಿಪ್ರಾಯ ಸದ್ಯ ಜನರಲ್ಲಿದ್ದು, ಲಸಿಕೆ ಪಡೆಯಲು ಉತ್ಸಾಹ ತೋರುತ್ತಿದ್ದಾರೆ.
ಹಾಗೆಯೇ ಕೊರೋನಾ ನಿಯಂತ್ರಣಕ್ಕೆ ಲಸಿಕೆಯೇ ಸೂಕ್ತ ಪರಿಹಾರವಾಗಿದ್ದು ದೇಶದ ಎಲ್ಲರಿಗೂ ಶೀಘ್ರದಲ್ಲೇ ಲಸಿಕೆ ನೀಡುವ ಕೆಲಸವಾಗಬೇಕಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವ್ಯಾಕ್ಸಿನೇಷನ್ ಹೆಚ್ಚಿಸಿದಲ್ಲಿ ಕೊರೋನಾ ನಿಯಂತ್ರಣ ಸಾಧ್ಯ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.