ಪುತ್ತೂರು: ಸಂಗೀತ ಲೋಕದ ಪುಟಾಣಿ ತಾರೆ 5 ರ ಹರೆಯದ ಜ್ಞಾನ ಗುರುರಾಜ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತಮ್ಮ ಹೆಸರು ದಾಖಲಾಗುವಂತಹ ಸಾಧನೆಯೊಂದನ್ನು ಮಾಡಿದ್ದಾರೆ.
ಸಂಗೀತ ಯಾನದಲ್ಲಿ 20 ಹಾಡುಗಳನ್ನು ಹಾಡುವ ಮೂಲಕ ಜ್ಞಾನ ಮುಡಿಗೆ ಈ ಸಾಧನೆಯ ಗರಿ ಸೇರಿದೆ. ಕನ್ನಡ ಖಾಸಗಿ ವಾಹಿನಿಯೊಂದರ ಸರಿಗಮಪ ಸಂಗೀತ ಸ್ಪರ್ಧೆಯ ಮೂಲಕ ಮನೆಮಾತಾಗಿದ್ದ ಈ ಪುಟಾಣಿ ಈವರೆಗೆ 112 ಮೆಡಲ್ಗಳು, ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಸದ್ಯ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿಯೂ ತಮ್ಮ ಹೆಸರು ಬರುವಂತೆ ಚಿಕ್ಕ ಪ್ರಾಯದಲ್ಲೇ ಮಹತ್ವದ ಸಾಧನೆ ಮೆರೆದಿದ್ದಾರೆ.
ಈ ಪುಟಾಣಿ ಕಡಬ ತಾಲೂಕಿನ ಕೊಂಬಾರು ಕಟ್ಟೆ ಇಡ್ಯಡ್ಕದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ತಾಯಿ ರೇಖಾ ಅವರು ರಾಮನಗರ ಮೊರಾರ್ಜಿ ದೇಸಾಯಿ ಶಾಲೆಯ ಶಿಕ್ಷಕಿ, ತಂದೆ ಗುರುರಾಜ್ ಹಿನ್ನೆಲೆ ಗಾಯಕರಾಗಿದ್ದಾರೆ. ತಮ್ಮ ಎರಡೂವರೆ ವರ್ಷದಲ್ಲೇ 10 ಕಷ್ಟಕರ ಹಾಡುಗಳನ್ನು ಹಾಡಿದ್ದ ಈ ಪುಟಾಣಿ ಮೂರನೇ ವರ್ಷದಲ್ಲಿ ಕರ್ನಾಟಕ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದ್ದರು. ಇದೀಗ ಈ ‘ಪುಟಾಣಿ ಸಂಗೀತ ಜ್ಞಾನ’ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡುವ ಮೂಲಕ ಮತ್ತಷ್ಟು ಸಾಧನೆ ಮೆರೆದಿದ್ದಾರೆ. ಹಾಗೆಯೇ ರಾಮನಗರದ ಸ್ವಚ್ಛ ಸರ್ವೇಕ್ಷಣ ಸಮಿತಿಯ ರಾಯಭಾರಿಯೂ ಹೌದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.