ನವದೆಹಲಿ: ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರದ ಸಕ್ರಿಯ ಪ್ರಯತ್ನದ ಫಲವಾಗಿ ಇಂದು ದೇಶದಲ್ಲಿ ವೈರಸ್ ವಿರೋಧಿ ಔಷಧ ರೆಮ್ಡೆಸಿವಿರ್ ಹೆಚ್ಚುವರಿಯಾಗಿ ಇದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಾಹಿತಿ ನೀಡಿದ್ದಾರೆ.
ಗಂಭೀರ ಕೋವಿಡ್ ರೋಗಿಗಳ ವೈದ್ಯಕೀಯ ಆರೈಕೆಯಲ್ಲಿ ಬಳಸುವ ಈ ಪ್ರಮುಖ ಔಷಧದ ಉತ್ಪಾದನೆಯನ್ನು ಕೇವಲ ಒಂದು ತಿಂಗಳ ಅಲ್ಪಾವಧಿಯಲ್ಲಿ ಸುಮಾರು ಹತ್ತು ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಏಪ್ರಿಲ್ ಮಧ್ಯದಲ್ಲಿ ದಿನಕ್ಕೆ ಸುಮಾರು 33 ಸಾವಿರ ವಯಲ್ಸ್ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಲಾಗಿತ್ತು, ಆದರೆ ಈಗ ರಾಷ್ಟ್ರವು ಒಂದು ದಿನದಲ್ಲಿ ಸುಮಾರು 3 ಲಕ್ಷ 50 ಸಾವಿರ ವಯಲ್ಸ್ ರೆಮ್ಡೆಸಿವಿರ್ ಉತ್ಪಾದಿಸುತ್ತದೆ ಎಂದು ಅವರು ಹೇಳಿದ್ದಾರೆ.
ಆ್ಯMಟಿ-ವೈರಲ್ ಔಷಧದ ಉತ್ಪಾದನಾ ಯುನಿಟ್ಗಳ ಸಂಖ್ಯೆಯನ್ನು ಒಂದು ತಿಂಗಳಲ್ಲಿ 20 ರಿಂದ ಸುಮಾರು 60 ಯುನಿಟ್ಗಳಿಗೆ ಹೆಚ್ಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಬೇಡಿಕೆಗಿಂತ ಸರಬರಾಜು ಹೆಚ್ಚಿರುವುದರಿಂದ ದೇಶದಲ್ಲಿ ಈಗ ಸಾಕಷ್ಟು ರೆಮ್ಡೆಸಿವಿರ್ ಇದೆ ಎಂದು ಮಾಂಡವಿಯಾ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.