ನವದೆಹಲಿ: ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಕಾಯಿಲೆಯನ್ನು ಎದುರಿಸಲು ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಚುಚ್ಚುಮದ್ದಿನ ಲಭ್ಯತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ.
ಉತ್ಪಾದನೆಯನ್ನು ಹೆಚ್ಚಿಸಲು, ಈ ಔಷಧಿಯನ್ನು ತಯಾರಿಸಬಹುದಾದ ಇನ್ನೂ ಐದು ಕಂಪನಿಗಳಿಗೆ ಸರ್ಕಾರ ಪರವಾನಗಿ ನೀಡಿದೆ. ಈ ಔಷಧಿಯನ್ನು ಜಗತ್ತಿನಲ್ಲಿ ಲಭ್ಯವಿರುವ ಎಲ್ಲಿಂದಲಾದರೂ ಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ವರದಿಗಳ ಪ್ರಕಾರ, ವಿಶ್ವದಾದ್ಯಂತದ ಭಾರತೀಯ ಮಿಷನ್ ಈ ಔಷಧಿಯ ಸರಬರಾಜುಗಳನ್ನು ಭದ್ರಪಡಿಸುವಲ್ಲಿ ತೊಡಗಿಕೊಂಡಿವೆ. ಅಮೇರಿಕಾದಲ್ಲಿನ ಗಿಲ್ಯಾಡ್ ಸೈನ್ಸಸ್ ಸಹಾಯದಿಂದ ಇದನ್ನು ಸಾಧಿಸಲಾಗುತ್ತಿದೆ. ಗಿಲ್ಯಾಡ್ ಸೈನ್ಸಸ್ ಮೈಲಾನ್ ಮೂಲಕ ಭಾರತಕ್ಕೆ ಆಂಬಿಸೋಮ್ ಸರಬರಾಜನ್ನು ತ್ವರಿತಗೊಳಿಸುವ ಕೆಲಸ ಮಾಡುತ್ತಿದೆ.
ಈವರೆಗೆ 121,000 ವಯಲ್ಸ್ಗಳು ಭಾರತವನ್ನು ತಲುಪಿವೆ. ಇನ್ನೂ 85,000 ವಯಲ್ಸ್ ದಾರಿಯಲ್ಲಿವೆ. ಕಂಪನಿಯು ಮೈಲಾನ್ ಮೂಲಕ ಭಾರತಕ್ಕೆ ಒಂದು ಮಿಲಿಯನ್ ಡೋಸ್ ಆಂಬಿಸೋಮ್ ಅನ್ನು ಪೂರೈಸುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.