ಬೆಂಗಳೂರು: ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಸರ್ಕಾರದ ಜೊತೆಗೆ ಕೈಜೋಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಾಸಗಿ ಉದ್ಯಮ ವಲಯಗಳಿಗೆ ಮನವಿ ಮಾಡಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಇದಕ್ಕೆ ಪೂರಕ ಎಂಬಂತೆ ಇಂದು Gold Man Sachs ಕಂಪೆನಿಯ ಅಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೊರೋನಾ ಚಿಕಿತ್ಸೆಗೆ ಅನುಕೂಲವಾಗುವಂತೆ ಆಧುನಿಕ ಸೌಲಭ್ಯಗಳನ್ನು ಒಳಗೊಂಡ 250 ಹಾಸಿಗೆಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ.
ಸಂಸ್ಥೆಯು ಸೈಂಟ್ ಜಾನ್ ಆಸ್ಪತ್ರೆಗೆ 50 ಐಸಿಯು ಬೆಡ್, ಪ್ರಕ್ರಿಯಾ ಆಸ್ಪತ್ರೆಗೆ 5 ಐಸಿಯು ಬೆಡ್ ಸೇರಿದಂತೆ ಕೊರೋನಾ ಆರೈಕೆ ಕೇಂದ್ರಕ್ಕೆ 50 ಹಾಸಿಗೆ, HAL ಕೊರೋನಾ ಆರೈಕೆ ಕೇಂದ್ರ ಕ್ಕೆ 50 ಹಾಸಿಗೆಗಳು, ನಾರಾಯಣ ಹೆಲ್ತ್ ಆಸ್ಪತ್ರೆಗೆ 120 ಎಚ್ಡಿಯು ಹಾಸಿಗೆಗಳನ್ನು ನೀಡುವುದಾಗಿ ತಿಳಿಸಿದೆ.
ಈ ಹಿಂದೆ ಟಿಎಕ್ಸ್ಇನ್ಸ್ಟ್ರುಮೆಂಟ್ಸ್ ಇನ್, ದಿ ಎಂಬಸೀ ಗ್ರೂಪ್ಗಳು ಸಹ ಸರ್ಕಾರದ ಜೊತೆ ಕೊರೋನಾ ಹೋರಾಟಕ್ಕೆ ಕೈ ಜೋಡಿಸಿದ್ದು, ನೆರವಿನ ಹಸ್ತ ಚಾಚಿದ್ದವು. ಇದೀಗ ಗೋಲ್ಡ್ ಮ್ಯಾನ್ ಸಚ್ಸ್ ಸಂಸ್ಥೆಯೂ ಸರ್ಕಾರದ ಜೊತೆಗೆ ಕೈ ಜೋಡಿಸುವ ಮೂಲಕ ಮಾದರಿಯಾಗಿದೆ.
ಕೊರೋನಾ ವಿರುದ್ಧ ಸರ್ಕಾರದೊಂದಿಗೆ ಕೈಜೋಡಿಸುವಂತೆ, ಖಾಸಗಿ ಉದ್ಯಮ ವಲಯಕ್ಕೆ ಮುಖ್ಯಮಂತ್ರಿ ಶ್ರೀ@BSYBJPರವರ ಕರೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇಂದು @GoldmanSachs ಕಂಪನಿ ಅಧಿಕಾರಿಗಳು @CMofKarnataka ಭೇಟಿಯಾಗಿ ಸಂಸ್ಥೆ ವತಿಯಿಂದ ಕೋವಿಡ್ ಚಿಕಿತ್ಸೆಗೆ 250 ಆಧುನಿಕ ಸೌಕರ್ಯವುಳ್ಳ ಹಾಸಿಗೆಗಳನ್ನು ನೀಡುವುದಾಗಿ ತಿಳಿಸಿದರು. (1/3) pic.twitter.com/7Av7cskR6W
— DIPR Karnataka (@KarnatakaVarthe) May 26, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.