ಮಂಗಳೂರು: ಕೊರೋನಾ ಸೋಂಕಿನ ಎರಡನೇ ಅಲೆಗೆ ದೇಶ ತತ್ತರಿಸಿದೆ. ಕರ್ನಾಟಕದಲ್ಲಿಯೂ ಕೊರೋನಾ ಸ್ಥಿತಿ ಗಂಭೀರವಾಗಿದ್ದು, ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ವಿದೇಶಗಳಿಂದ ಪ್ರಾಣ ರಕ್ಷಕ ಆಮ್ಲಜನಕ ಆಮದು ಮಾಡುತ್ತಿದೆ.
ಇದೀಗ ಕೇಂದ್ರ ಸರ್ಕಾರ ಕುವೈಟ್ನಿಂದ ಐಎನ್ಎಸ್ ಶಾರ್ದೂಲ್ ಯುದ್ಧ ನೌಕೆಯ ಮೂಲಕ ಆಮ್ಲಜನಕ ಆಮದು ಮಾಡಿಕೊಂಡಿದೆ. ಈ ನೌಕೆ ಇಂದು ರಾಜ್ಯದ ನವಮಂಗಳೂರು ಬಂದರಿಗೆ ಬಂದಿಳಿದಿದೆ. 147 ಟನ್ ದ್ರವೀಕೃತ ಆಕ್ಸಿಜನ್ ಹೊತ್ತ ಈ ನೌಕೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಅವರು ಬರಮಾಡಿಕೊಂಡರು.
ದ್ರವೀಕೃತ ಆಮ್ಲಜನಕ ಹೊಂದಿದ 11 ಟ್ಯಾಂಕ್ಗಳು, 2 ಸೆಮಿ ಟ್ರೇಲರ್ಗಳು, 1200 ಆಕ್ಸಿಜನ್ ಸಿಲಿಂಡರ್ಗಳು ಈ ಹಡಗಿನ ಮೂಲಕ ಮಂಗಳೂರಿನ ಎನ್ಎಂಪಿಟಿ ಬಂದು ತಲುಪಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.