ನವದೆಹಲಿ: ದೇಶದ ಆಮ್ಲಜನಕ ಬಿಕ್ಕಟ್ಟನ್ನು ತಗ್ಗಿಸುವ ಪ್ರಯತ್ನಗಳ ಭಾಗವಾಗಿ ಭಾರತೀಯ ನೌಕಾಪಡೆ ಆಕ್ಸಿಜನ್ ಮರುಬಳಕೆ ವ್ಯವಸ್ಥೆ (Oxygen Recycling System) ಅನ್ನು ವಿನ್ಯಾಸಗೊಳಿಸಿದೆ.
ಭಾರತೀಯ ನೌಕಾಪಡೆಯ ದಕ್ಷಿಣ ನೇವಲ್ ಕಮಾಂಡ್ನ ಡೈವಿಂಗ್ ಸ್ಕೂಲ್ ಅಸ್ತಿತ್ವದಲ್ಲಿರುವ ಆಮ್ಲಜನಕದ ಕೊರತೆಯನ್ನು ನೀಗಿಸಲು ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದೆ.
ಅಸ್ತಿತ್ವದಲ್ಲಿರುವ ವೈದ್ಯಕೀಯ ಆಮ್ಲಜನಕ ಸಿಲಿಂಡರ್ಗಳ ಜೀವಿತಾವಧಿಯನ್ನು ಎರಡರಿಂದ ನಾಲ್ಕು ಪಟ್ಟು ವಿಸ್ತರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ರೋಗಿಯು ಉಸಿರಾಟದ ವೇಳೆ ಆಮ್ಲಜನಕ ಸಿಲಿಂಡರ್ನಲ್ಲಿನ ಸಣ್ಣ ಪ್ರಮಾಣದ ಆಮ್ಲಜನಕವನ್ನು ಮಾತ್ರ ಎಳೆದುಕೊಳ್ಳುತ್ತಾನೆ, ಉಳಿದವುಗಳನ್ನು ಇಂಗಾಲ-ಡೈಆಕ್ಸೈಡ್ನೊಂದಿಗೆ ಹೊರಬಿಡುತ್ತಾನೆ. ಈ ವಾಸ್ತವಾಂಶವನ್ನು ಬಳಸಿ ಆಕ್ಸಿಜನ್ ಮರುಬಳಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳಿಗೆ ಅನುಸಾರವಾಗಿ ಕ್ಲಿನಿಕಲ್ ಪ್ರಯೋಗಗಳಿಗಾಗಿ ಈ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ, ಇವುಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿರೀಕ್ಷೆಯಿದೆ. ನಂತರ ಈ ವ್ಯವಸ್ಥೆ ದೇಶದಲ್ಲಿ ಬೃಹತ್ ಉತ್ಪಾದನೆಗೆ ಮುಕ್ತವಾಗಿ ಲಭ್ಯವಿರುತ್ತದೆ.
ಆಕ್ಸಿಜನ್ ಮರುಬಳಕೆ ವ್ಯವಸ್ಥೆಯಲ್ಲಿ ಬಳಸುವ ಎಲ್ಲಾ ಘಟಕಗಳು ದೇಶೀಯವಾಗಿರುತ್ತದೆ ಮತ್ತು ದೇಶದಲ್ಲಿ ಮುಕ್ತವಾಗಿ ಲಭ್ಯವಿರುತ್ತವೆ ಎಂದು ಸಚಿವಾಲಯ ಹೇಳಿದೆ.
ಆಮ್ಲಜನಕದ ಮರುಬಳಕೆಯಿಂದಾಗಿ ದಿನಕ್ಕೆ ಮೂರು ಸಾವಿರ ರೂಪಾಯಿಗಳನ್ನು ಉಳಿಸಬಹುದು ಮತ್ತು ಈ ವ್ಯವಸ್ಥೆಯ ಮೂಲಮಾದರಿಯ ಒಟ್ಟಾರೆ ವೆಚ್ಚ 10 ಸಾವಿರ ರೂಪಾಯಿಗಳಾಗಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.