ಜಮ್ಮು: ಕಾಶ್ಮೀರದ ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯಲು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸ್ಥಳೀಯ ಕಮಾಂಡರ್ ಬುರ್ಹಾನ್ ವಾನಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾನೆ ಎಂದು ವರದಿಗಳು ತಿಳಿಸಿವೆ.
ವರದಿಯ ಪ್ರಕಾರ ಈಗಾಗಲೇ ಆತ 30 ದಕ್ಷಿಣ ಕಾಶ್ಮೀರದ ಯುವಕರನ್ನು ತನ್ನ ಸಂಘಟನೆ ನಡೆಸುತ್ತಿರುವ ಭಾರತ ವಿರೋಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ.
ಬುರ್ಹಾನ್ ಪುಲ್ವಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಸಕ್ರಿಯನಾಗಿದ್ದಾನೆ, ಈ ಪ್ರದೇಶ ಹಲವಾರು ವರ್ಷಗಳಿಂದ ಉಗ್ರರ ಅಡಗುತಾಣವಾಗಿದೆ. ಹಲವಾರು ಪ್ರಕರಣಗಳಲ್ಲಿ ಬೇಕಾಗಿರುವ ಈತನ ತಲೆಗೆ 10 ಲಕ್ಷ ಘೋಷಿಸಲಾಗಿದೆ.
ಇದೀಗ ಸಾಮಾಜಿಕ ಜಾಲತಾಣಗಳನ್ನು ಬಳಸಿ ಆತ ಯುವಕರನ್ನು ಭಯೋತ್ಪಾದನೆಗಿಳಿಯುವಂತೆ ಪ್ರೇರೇಪಿಸುತ್ತಿದ್ದಾನೆ. ಟೈಗರ್ ಟ್ರಾಲ್, ಎಚ್ಎಮ್ ಟ್ರಾಲ್, ಬುರ್ಹಾನ್ ಟ್ರಾಲ್ ಮುಂತಾದ ಹೆಸರುಗಳಲ್ಲಿ ಈತ ಫೇಸ್ಬುಕ್ ಪೇಜ್ ನಡೆಸುತ್ತಿದ್ದಾನೆ, ಟ್ವಿಟರ್ನಲ್ಲೂ ಇದ್ದಾನೆ.
ಪದೇ ಪದೇ ಫೇಸ್ಬುಕ್ ಹೆಸರು ಬದಲಿಸುತ್ತಿರುತ್ತಾನೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ತಮ್ಮ ತರಬೇತಿ ಸೇರಿದಂತೆ ಹಲವು ಕಾರ್ಯಗಳ ವಿಡಿಯೋ, ಫೋಟೋಗಳನ್ನು ಫೇಸ್ಬುಕ್ನಲ್ಲಿ ಹಾಕಿದ್ದಾನೆ. ಬಳಿಕ ಅದನ್ನು ತೆಗೆದು ಹಾಕಿದ್ದಾನೆ. ತಮ್ಮ ಸದಸ್ಯರ ಮುಖವನ್ನು ಮುಖವಾಡವಿಲ್ಲದೆ ತೋರಿಸಲೂ ಈತ ಹೆದರುವುದಿಲ್ಲ.
ಈತನ ದುಷ್ಕೃತ್ಯಕ್ಕೆ ಅಂತ್ಯ ಹಾಡದೇ ಹೋದರೆ ಇನ್ನಷ್ಟು ಕಾಶ್ಮೀರಿ ಯುವಕರು ಭಯೋತ್ಪಾದನೆಯ ಹಾದಿ ಹಿಡಿಯುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.