ನವದೆಹಲಿ: ಭಾರತೀಯ ರೈಲ್ವೆ 13 ರಾಜ್ಯಗಳಿಗೆ 10,300 ಟನ್ಗಿಂತಲೂ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ತಲುಪಿಸಿದೆ. ರೈಲ್ವೆ ಸಚಿವಾಲಯವು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ದ್ರವ ವೈದ್ಯಕೀಯ ಆಮ್ಲಜನಕವನ್ನು ತಲುಪಿಸುವ ಮೂಲಕ ದೇಶದ ಕೋವಿಡ್ ವಿರುದ್ಧದ ಹೋರಾಟಕ್ಕೆ ಬಲ ತುಂಬುತ್ತಿದೆ.
ಆಕ್ಸಿಜನ್ ಎಕ್ಸ್ಪ್ರೆಸ್ಗಳು ಪ್ರತಿದಿನ ಸುಮಾರು 800 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ರಾಷ್ಟ್ರಕ್ಕೆ ತಲುಪಿಸುತ್ತಿವೆ. ತೌಕ್ತೆ ಚಂಡಮಾರುತದ ಹೊರತಾಗಿಯೂ, ರಾಷ್ಟ್ರಕ್ಕೆ 150 ಟನ್ ಆಮ್ಲಜನಕವನ್ನು ತಲುಪಿಸಲು ರೈಲ್ವೆ ಗುಜರಾತ್ನಿಂದ ಮುಂಜಾನೆ ಎರಡು ಆಕ್ಸಿಜನ್ ಎಕ್ಸ್ಪ್ರೆಸ್ಗಳನ್ನು ಹೊತ್ತು ಸಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ರೈಲ್ವೆ ಪಶ್ಚಿಮದಲ್ಲಿ ಹಪಾ ಮತ್ತು ಮುಂಡ್ರಾ ಮತ್ತು ಪೂರ್ವದಲ್ಲಿ ರೂರ್ಕೆಲಾ, ದುರ್ಗಾಪುರ, ಟಾಟಾನಗರ್, ಅಂಗುಲ್ ಮುಂತಾದ ಸ್ಥಳಗಳಿಂದ ಆಮ್ಲಜನಕವನ್ನು ತೆಗೆದುಕೊಂಡು ನಂತರ ಅದನ್ನು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರ, ತಮಿಳುನಾಡು ಹರಿಯಾಣ, ತೆಲಂಗಾಣ, ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಿಗೆ ತಲುಪಿಸುತ್ತಿದೆ.
ಸಚಿವಾಲಯದ ಪ್ರಕಾರ, ಸುಮಾರು 160 ಆಕ್ಸಿಜನ್ ಎಕ್ಸ್ಪ್ರೆಸ್ಗಳು ಈವರೆಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಆಮ್ಲಜನಕ ಪೂರೈಕೆ ಮೂಲಕ ಪರಿಹಾರವನ್ನು ನೀಡಿವೆ.
ರೈಲ್ವೆ ಇದುವರೆಗೆ 521 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಮಹಾರಾಷ್ಟ್ರಕ್ಕೆ, 2652 ಟನ್ ಉತ್ತರ ಪ್ರದೇಶಕ್ಕೆ, 431 ಟನ್ ಮಧ್ಯಪ್ರದೇಶಕ್ಕೆ, 3734 ಟನ್ ದೆಹಲಿಗೆ, 1290 ಟನ್ ಹರಿಯಾಣಕ್ಕೆ, 564 ಟನ್, ತೆಲಂಗಾಣಕ್ಕೆ, 404 ಟನ್ ರಾಜಸ್ಥಾನಕ್ಕೆ, 371 ಟನ್ ಕರ್ನಾಟಕಕ್ಕೆ, ಉತ್ತರಾಖಂಡಕ್ಕೆ 200 ಟನ್, ತಮಿಳುನಾಡಿಗೆ 231 ಟನ್, ಕೇರಳಕ್ಕೆ 118 ಟನ್ ಮತ್ತು ಪಂಜಾಬಿಗೆ 40 ಟನ್ ತಲುಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.