ಬೆಂಗಳೂರು: ರಾಜ್ಯದ ಧಾರವಾಡದಲ್ಲಿರುವ ಶಿಲ್ಪಾ ಬಯೋಲಾಜಿಕಲ್ಸ್ ಪ್ರೈ. ಲಿ. ನ ಅಂಗಸಂಸ್ಥೆಯಾದ ಶಿಲ್ಪಾ ಮೆಡಿಕೇರ್ ಭಾರತದಲ್ಲಿ ಕೊರೋನಾ ಲಸಿಕೆ ಸ್ಪುಟ್ನಿಕ್ ವಿ ತಯಾರಿಕೆಗೆ ಸಂಬಂಧಿಸಿದಂತೆ ಡಾ. ರೆಡ್ಡಿ ಲ್ಯಾಬೊರೇಟರೀಸ್ ಜೊತೆಗೆ ಕೈಜೋಡಿಸಿ, 3 ವರ್ಷಗಳ ಡಿಫಿನಿಟಿವ್ ಒಪ್ಪಂದ ಮಾಡಿಕೊಂಡಿದೆ.
ಈ ಲಸಿಕೆಯನ್ನು ಧಾರವಾಡದಲ್ಲಿರುವ ಸಂಸ್ಥೆಯ ಸಮಗ್ರ ಜೈವಿಕ ವಿಜ್ಞಾನ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನಾ ಕೇಂದ್ರದಲ್ಲಿ ತಯಾರಿಸುವುದಾಗಿ ಸಂಸ್ಥೆ ತಿಳಿಸಿದೆ. ಈ ಒಪ್ಪಂದದ ಪ್ರಕಾರ ಶಿಲ್ಪಾ ಮೆಡಿಕೇರ್ ಸಂಸ್ಥೆ ಲಸಿಕೆ ತಯಾರಿಸುವ ಜವಾಬ್ದಾರಿ ಹೊತ್ತಿದ್ದರೆ, ಅದಕ್ಕೆ ಮಾರುಕಟ್ಟೆ ಒದಗಿಸುವ ಕೆಲಸವನ್ನು, ವಿತರಣೆಯ ಕಾರ್ಯವನ್ನು ಡಾ ರೆಡ್ಡಿ ಲ್ಯಾಬೊರೇಟರೀಸ್ ವಹಿಸಿಕೊಂಡಿದೆ.
ಜೊತೆಗೆ ಮುಂದಿನ ದಿನಗಳಲ್ಲಿ ಒಂದೇ ಡೋಸ್ ಪಡೆಯುವುದರಿಂದ ಕೊರೋನಾ ವಿರುದ್ಧ ಸಮರ್ಥವಾಗಿ ಹೋರಾಡುವ ಸ್ಪುಟ್ನಿಕ್ ಲೈಟ್ ತಯಾರಿಸಲು ಸಮರ್ಥವಿರುವ ತಯಾರಿಕಾ ಸಂಸ್ಥೆಗಳನ್ನು ಸಂಸ್ಥೆ ಅನ್ವೇಷಣೆ ಮಾಡುತ್ತಿದೆ ಎಂದು ಡಾ ರೆಡ್ಡಿ ಸಂಸ್ಥೆ ತಿಳಿಸಿದೆ.
ಮುಂದಿನ ಎಂಟರಿಂದ ಹತ್ತು ತಿಂಗಳುಗಳೊಳಗಾಗಿ ಭಾರತ 250 ಮಿಲಿಯನ್ ಡೋಸ್ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಸ್ವೀಕರಿಸಲಿದೆ. ಜುಲೈನಿಂದ ತೊಡಗಿದಂತೆ ಭಾರತದಲ್ಲಿಯೇ ಇದರ ಉತ್ಪಾದನೆ ಆರಂಭವಾಗಲಿದೆ ಎಂದು ಸಂಸ್ಥೆಯ ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿ ದೀಪಕ್ ಮಿಶ್ರ ತಿಳಿಸಿದ್ದಾರೆ. ಈ ಲಸಿಕೆಗೆ ರಷ್ಯಾದ ಗಮಲಯಾ ಇನ್ಸ್ಟಿಟ್ಯೂಟ್ 948 ರೂ. ನಿಗದಿ ಮಾಡಿದ್ದು, 5% ಜಿಎಸ್ಟಿ ಜೊತೆಗೆ 995.40 ರೂ. ಗಳಿಗೆ ದೊರೆಯಲಿದೆ ಎಂದು ಮಿಶ್ರ ತಿಳಿಸಿದ್ದಾರೆ.
ಭಾರತವು ಡಿಸೆಂಬರ್ 2021 ರ ವೇಳೆಗೆ ತನ್ನೆಲ್ಲಾ ನಾಗರಿಕರಿಗೆ ಚುಚ್ಚುಮದ್ದು ಒದಗಿಸಲು ಅಗತ್ಯವಾದಷ್ಟು ಪ್ರಮಾಣದಲ್ಲಿ ಕೊರೋನಾ ಲಸಿಕೆಗಳನ್ನು ಹೊಂದಿರಲಿದೆ. ಆಗಸ್ಟ್ ನಿಂದ ಡಿಸೆಂಬರ್ ಒಳಗಾಗಿ ದೇಶದಲ್ಲಿ 216 ಕೋಟಿ ಡೋಸ್ ಲಸಿಕೆಗಳನ್ನು ದೇಶದಲ್ಲೇ ತಯಾರಿಸಲಾಗುತ್ತದೆ ಎಂದು ಕೊರೋನಾ ಲಸಿಕೆಗಳ ರಾಷ್ಟ್ರೀಯ ಕಾರ್ಯಪಡೆಯ ಮುಖ್ಯಸ್ಥ ವಿ ಕೆ ಪೌಲ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.