ನವದೆಹಲಿ: ಬಾಲಿವುಡ್ ಖ್ಯಾತ ಗಾಯಕ ಅರ್ಜೀತ್ ಸಿಂಗ್ ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದಿದೆ.
ವಿವಾದಗಳಿಂದ ಸದಾ ದೂರವಿರುವ ಅರ್ಜೀತ್ಗೆ ಹಣಕ್ಕಾಗಿ ಆತ ಬೆದರಿಕೆಯೊಡ್ಡಿದ್ದಾನೆ. ಮೂಲಗಳ ಪ್ರಕಾರ 5 ಕೋಟಿ ರೂಪಾಯಿ ಹಣಕ್ಕೆ ಆತ ಬೇಡಿಕೆಯಿಟ್ಟಿದ್ದಾನೆ.
ಬಳಿಕ ಅರ್ಜೀತ್ ಬಳಿ ಅಷ್ಟೊಂದು ಹಣವಿಲ್ಲ ಎಂದು ತಿಳಿದ ಪೂಜಾರಿ, ಕೆಲವೊಂದು ಶೋಗಳನ್ನು ನಡೆಸಿಕೊಡುವಂತೆ ದುಂಬಾಲು ಬಿದ್ದಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಅರ್ಜೀತ್ ಇದುವರೆಗೆ ಯಾವುದೇ ಅಧಿಕೃತ ದೂರುಗಳನ್ನು ದಾಖಲಿಸಲಿಲ್ಲ, ಆದರೆ ಓಶಿವಾರ ಪೊಲೀಸ್ ಸ್ಟೇಶನ್ನಿಗೆ ಆಗಮಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಸ್ಟೇಶನ್ನಿಗೆ ಆಗಮಿಸಿದ್ದು ಡೈರಿಯಲ್ಲಿ ದಾಖಲಾಗಿದೆ ಎನ್ನಲಾಗಿದೆ.
ಈ ರೀತಿಯಾಗುತ್ತಿರುವುದು ನನಗೆ ಇದೇ ಮೊದಲ ಬಾರಿ, ಇದು ದೊಡ್ಡ ವಿಷಯವಲ್ಲ ಎಂದು ನನಗನಿಸುತ್ತದೆ. ಇದೆಲ್ಲಾ ವ್ಯವಹಾರಗಳ ಭಾಗ ಎಂದು ಅರ್ಜೀತ್ ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.