ಬೆಂಗಳೂರು: ಕೋವಿಡ್ ರೆಸ್ಪಾನ್ಸ್ ಟೀಮ್ ನವದೆಹಲಿ ವತಿಯಿಂದ ಕೊರೋನಾ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸರಣಿ ಉಪನ್ಯಾಸ ಮಾಲಿಕೆ ‘ಪಾಸಿಟಿವಿಟಿ ಅನ್ಲಿಮಿಟೆಡ್’ ನ ಮೂರನೇ ದಿನದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪದ್ಮವಿಭೂಷಣ ಡಾ ಸೋನಲ್ ಮಾನ್ಸಿಂಗ್ ಮಾತನಾಡಿ, ಎಲ್ಲರ ಮನಸ್ಸು, ಹೃದಯದಲ್ಲಿ ಏನಾದರೊಂದು ಅಡಗಿರುತ್ತದೆ. ಅದು ಗೀತೆಯಾಗಿರಬಹುದು, ಯಾವುದೋ ಸುಭಾಷಿತ ವಾಗಿರಬಹುದು, ಕವಿತೆ, ಶ್ಲೋಕ ಅಥವಾ ಸಿನಿಮಾ ಗೀತೆ ಯಾಗಿರಬಹುದು, ಕೆಲವರು ನಾಟಕ ನೋಡುತ್ತಿರಬಹುದು. ನಾವು ಇದನ್ನು ಮಾಡದೇ ಇದ್ದರೆ ಹತಾಶೆಯ ಕಡಲಿನಲ್ಲಿ ಮುಳುಗಿ ಹೋಗುತ್ತೇವೆ. ಪ್ರತಿಯೊಬ್ಬರಲ್ಲೂ ಇರುವ ಇಂತಹ ಕಲೆಗಳಿಂದ ಹತಾಶೆ, ನಿರಾಸೆ ದೂರವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯರ ಸ್ವಾಮೀಜಿ, ಭಾರತೀಯ ಸಮಾಜಕ್ಕೆ ಇಂದಿನ ಸಂದರ್ಭದಲ್ಲಿ ಪ್ರಯತ್ನ ನಡೆಸುವ, ಪರಿಶ್ರಮ ಪಡುವ, ಪ್ರಾರ್ಥನೆ ಮಾಡುವ ಅದರ ಜೊತೆಜೊತೆಗೆ ಎಲ್ಲಕ್ಕೂ ಮೊದಲು ಧೈರ್ಯದೊಂದಿಗೆ, ಆತ್ಮವಿಶ್ವಾಸದೊಂದಿಗೆ ಸಮಾಜದ ಮೇಲೆ, ಸರ್ಕಾರದ ಮೇಲೆ ವಿಶ್ವಾಸವಿಡುವ ಅಗತ್ಯವಿದೆ. ಸಮಸ್ಯೆಯಿಂದ ಮುಕ್ತರಾಗಲು ಸಂಪೂರ್ಣ ಪರಿಶ್ರಮದ ಹೋರಾಟದೊಂದಿಗೆ, ಪ್ರಯತ್ನಗಳು ನಡೆಯಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕಠಿಣ ಪರಿಸ್ಥಿತಿ ಜಯಿಸಲು ಎರಡು ದಾರಿಗಳ ಆಯ್ಕೆ ಮಾಡಬೇಕು. ಒಂದು ಪ್ರಾರ್ಥನೆ ಮೂಲಕ ಮತ್ತು ಇನ್ನೊಂದು ಆಯುರ್ವೇದದ ಮೂಲಕ . ವಿಶ್ವಶಾಂತಿ ಮತ್ತು ಮಾನವ ಕಲ್ಯಾಣಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಅವರು ನುಡಿದಿದ್ದಾರೆ. ದೌರ್ಬಲ್ಯ ಬಿಟ್ಟು, ವಿಶ್ವಾಸ ಮತ್ತು ಧೈರ್ಯದ ಜೊತೆಗೆ ಈ ಸವಾಲನ್ನು ಗೆಲ್ಲಬೇಕು ಎಂದು ಶ್ರೀಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.