ಬೆಂಗಳೂರು: ರಾಜ್ಯದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ನೀಡಲಾದ 2 ಕೋಟಿ ರೂ. ಅನುದಾನದಲ್ಲಿ 25% ಗಳಷ್ಟನ್ನು ಕೊರೋನಾ ನಿಯಂತ್ರಣಕ್ಕೆ ಪೂರಕವಾದ ವಸ್ತುಗಳನ್ನು ಮತ್ತು ಆಸ್ಪತ್ರೆಗಳ ಸುಧಾರಣೆಗೆ ಬಳಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಶಾಸಕರು ಈ ಹಿಂದೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು. ಕೊರೋನಾ ಸೋಂಕು ನಿಯಂತ್ರಣ, ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಸರ್ಕಾರ ಆಸ್ಪತ್ರೆಗಳಿಗೆ ನೀಡಲು ಅನುಕೂಲವಾಗುವಂತೆ, ಆಮ್ಲಜನಕ ಸಾಂಧ್ರಕಗಳು, ಹಾಸಿಗೆ ವ್ಯವಸ್ಥೆ ಮೊದಲಾದವುಗಳ ಕೊರತೆಯನ್ನು ಈ ಅನುದಾನದ ಮೂಲಕ ನಿಭಾಯಿಸಲು ಈ ನಿಯಮ ಅನುಕೂಲ ಒದಗಿಸಲಿದೆ.
ಶಾಸಕರು ಈ ಅನುದಾನದ 25% ಗಳನ್ನು ಬಳಕೆ ಮಾಡಬಹುದಾಗಿದೆ. ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯ ಒಟ್ಟು ಮೊತ್ತ 600 ಕೋಟಿ ಆಗಲಿದ್ದು, ಇದರಲ್ಲಿ 150 ಕೋಟಿ ರೂ. ಗಳನ್ನು ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಬಳಕೆ ಮಾಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.