ಬೆಂಗಳೂರು: ಕೊರೋನಾ ಒಂದನೇ ಅಲೆಯ ಸಂದರ್ಭದಲ್ಲಿ ನಗರದಲ್ಲಿ ಕೊರೋನಾ ಆಸ್ಪತ್ರೆಗಾಗಿ 100 ಕೋಟಿ ರೂ. ನೀಡಿದ್ದ ಇನ್ಫೋಸಿಸ್ ಫೌಂಡೇಶನ್, ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಮತ್ತೆ 100 ಕೋಟಿ ರೂ. ದೇಣಿಗೆ ನೀಡಲು ಮುಂದೆ ಬಂದಿದೆ.
ಈ ಸಂಬಂಧ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರು ಘೋಷಿಸಿದ್ದು, ಕಳೆದ ಬಾರಿಯೂ ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ 100 ಕೋಟಿ ರೂ. ಗಳನ್ನು ನೀಡಲಾಗಿತ್ತು. ವೆಂಟಿಲೇಟರ್, ಆಕ್ಸಿಜನ್ ಯಂತ್ರ ಪೂರೈಕೆಗೆ ಬಳಕೆ, ಮೂಲಸೌಕರ್ಯ ಬಳಕೆಗೆ ಸಂಬಂಧಪಟ್ಟಂತೆ ಈ ಬಾರಿಯೂ 100 ಕೋಟಿ ರೂ. ಗಳನ್ನು ನೀಡಲಾಗುವುದಾಗಿ ಅವರು ತಿಳಿಸಿದ್ದಾರೆ.
ಒಟ್ಟಾರೆ ಕೊರೋನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಂಸ್ಥೆ ಒಟ್ಟು 200 ಕೋಟಿ ರೂ. ಗಳನ್ನು ನೀಡುವ ಮೂಲಕ ಮಾದರಿಯಾಗಿದೆ. ಕಳೆದ ಬಾರಿ ನೆರವು ನೀಡಿದ ಆಸ್ಪತ್ರೆ ಈ ಬಾರಿಯೂ ಪರಿಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಬಾರಿಯ ಹಣವನ್ನು ಮೂಲಭೂತ ಸೌಕರ್ಯಗಳ ಪೂರೈಕೆಗಾಗಿ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಜೊತೆಗೆ ಮಂಗಳೂರು, ಪುಣೆ, ಹೈದರಾಬಾದ್, ನಾಗ್ಪುರ, ತಿರುವನಂತಪುರ ಸೇರಿದಂತೆ ಇನ್ನಿತರ ನಗರಗಳಿಗೂ ಕೊರೋನಾ ನಿಯಂತ್ರಣಕ್ಕೆ ಹಿಂದಿನಂತೆಯೇ ಸಂಸ್ಥೆ ನೆರವಾಗಲಿದೆ ಎಂದು ಸುಧಾಮೂರ್ತಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.