ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತಾಂಡವವಾಡುತ್ತಿದೆ. ಈ ನಡುವೆಯೇ ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡುವ ವೈದ್ಯಕೀಯ ಪರಿಕರ ಸೇರಿದಂತೆ ಇನ್ನಿತರ ವಿಚಾರಗಳ ದಂಧೆಯೂ ನಡೆಯುತ್ತಿದ್ದು, ಇಂತಹ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಸಹಕಾರಕ್ಕೆ ಪೊಲೀಸ್ ಮತ್ತು ಫೈರ್ ಇಂಜಿನ್ ಸೇವೆಗಳಿಗಾಗಿ ರಾಜ್ಯ ಸರ್ಕಾರ ತುರ್ತು ಸಹಾಯವಾಣಿ ನಮ್ಮ 112 ಅನ್ನು ಆರಂಭಿಸಿದೆ.
ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸಬೇಕಾದ ಹಾಸಿಗೆಗಳನ್ನು ಅನಧಿಕೃತವಾಗಿ ಕಾಯ್ದಿರಿಸುವ ಆಸ್ಪತ್ರೆಗಳು, ಕಾಳಸಂತೆಯಲ್ಲಿ ವೈದ್ಯಕೀಯ ಅಗತ್ಯಗಳ ಮಾರಾಟ, ಉದ್ದೇಶಪೂರ್ವಕವಾಗಿ ಆಕ್ಸಿಜನ್ ಅಭಾವ ಸೃಷ್ಟಿಸುವುದು ಮೊದಲಾದವುಗಳು ಕಂಡುಬಂದಲ್ಲಿ ಈ ಸಹಾಯವಾಣಿಯನ್ನು ಬಳಸಿ ಈ ಅಕ್ರಮಗಳ ಬಗ್ಗೆ ದೂರು ನೀಡಬಹುದಾಗಿದೆ.
ಕೇವಲ 15 ಸೆಕೆಂಡ್ಗಳಲ್ಲಿ ಈ ಸಹಾಯವಾಣಿಗೆ ಕರೆ ಮಾಡುವವರ ಕರೆಯನ್ನು ಸ್ವೀಕರಿಸಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಈ ಸಹಾರವಾಣಿ 24*7 ಕಾರ್ಯಾಚರಿಸಲಿದ್ದು ಆ ಮೂಲಕ ಸಾರ್ವಜನಿಕರ ಸಮಸ್ಯೆ ಆಲಿಸುವುದು ಮತ್ತು ಶೀಘ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಸಾರ್ವಜನಿಕರು ಇದರ ಅನುಕೂಲ ಪಡೆಯುವಂತೆ ಸರ್ಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.