ಬೆಂಗಳೂರು: ಕೊರೋನಾ ವಿರುದ್ಧ ಹೋರಾಟಕ್ಕೆ, ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ‘ಮೈ ಬೂತ್ – ಕೊರೋನಾ ಫ್ರೀ ಬೂತ್’ ಹೆಸರಿನಲ್ಲಿ ಸಾರ್ವಜನಿಕರಿಗೆ ಸಹಕರಿಸಲು ಯೋಜನೆ ರೂಪಿಸಿದೆ.
ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಈ ನಿರ್ಣಯ ಕೈಗೊಂಡಿದೆ. ರಾಜ್ಯದ ಸುಮಾರು 350 ಸ್ಥಳಗಳಲ್ಲಿ ಬಿಜೆಪಿಯ ಈ ಕಾಲ್ ಸೆಂಟರ್, ಕೋವಿಡ್ ಆರೈಕೆ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ.
ಕಾಲ್ ಸೆಂಟರ್ಗಳಲ್ಲಿ ಪ್ರಮುಖವಾಗಿ ಆಸ್ಪತ್ರೆಗಳ ವೆಂಟಿಲೇಟರ್ ಲಭ್ಯತೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಈ ಕೇಂದ್ರಗಳು ಮಾಹಿತಿ ನೀಡಲಿದೆ. ದೇಶದೆಲ್ಲೆಡೆ 56 ಸಾವಿರಕ್ಕೂ ಅಧಿಕ ಮಂದಿ ಬಿಜೆಪಿ ಕಾರ್ಯಕರ್ತರು ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಕೇಂದ್ರಗಳಲ್ಲಿ 13 ರೀತಿಯ ಸೇವಾ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. 1) ಆಸ್ಪತ್ರೆಗಳ ಮಾಹಿತಿ 2) ವೆಂಟಿಲೇಟರ್ ಬಗ್ಗೆ ಮಾಹಿತಿ 3) ಆಂಬ್ಯುಲೆನ್ಸ್ ಸೇವೆ 4) ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ 5) ಮಾಸ್ಕ್ ಗಳ ವಿತರಣೆ 6) ಕೊರೋನ ಪೀಡಿತ ಮನೆಗಳಿಗೆ ಆಹಾರ ಪೊಟ್ಟಣ ವಿತರಣೆ 7) ಆಕ್ಸಿಜನ್ ಬೇಕಾದವರಿಗೆ ಸ್ಪಂದನೆ 8) ರೆಮಿಡಿಸಿವಿರ್ ಇಂಜೆಕ್ಷನ್ ಬೇಕಾದವರಿಗೆ ಸಹಾಯ ಹಸ್ತ 9) ಶವ ಸಂಸ್ಕಾರ 10) ವಯಸ್ಸಾದ ಕೊರೋನ ಪೀಡಿತರಿಗೆ ಸೇವೆ 11) ರಕ್ತದಾನ ಕಾರ್ಯಕ್ರಮಗಳು 12) ಟೆಲಿಮೆಡಿಸಿನ್ 13) ಐಸೋಲೇಷನ್ (ಆರೈಕೆ) ಕೇಂದ್ರ ಹೀಗೆ ಹಲವಾರು ರೀತಿಯಲ್ಲಿ ಕೊರೋನ ಸೋಂಕಿತರಿಗೆ ಪಕ್ಷದ ಕಾರ್ಯಕರ್ತರು ನೆರವಾಗುತ್ತಿದ್ದಾರೆ.
ಜವಾಬ್ದಾರಿಯುತ ಸಂಘಟಿತ ಸೇವಾ ಮನೋಭಾವದ ಪಕ್ಷದ ಕಾರ್ಯಕರ್ತರಾಗಿ ನಮ್ಮ ಸಾಮಾಜಿಕ ಬದ್ಧತೆಯನ್ನು ರಾಜಕೀಯ ಅಧಿಕಾರ ಸೇವೆಗಾಗಿ, ಅಂತ್ಯೋದಯಕ್ಕಾಗಿ, ಶ್ರೀಸಾಮಾನ್ಯರ ರಕ್ಷಣೆ, ಪೋಷಣೆ ಮಾಡುವ ಉದ್ದೇಶದಿಂದ ಸಂಕಷ್ಟದಲ್ಲಿರುವವರೆಗೆ ಸಂವೇದನಾಶೀಲರಾಗಿ ಸ್ಪಂದಿಸುವ ಕಾರ್ಯದಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.