News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

100 ಆಮ್ಲಜನಕ ಸಾಂದ್ರಕಗಳನ್ನು ಭಾರತಕ್ಕೆ ನೀಡಿದ ಪೋಲ್ಯಾಂಡ್

ನವದೆಹಲಿ: ಕೋವಿಡ್-19 ಸೋಂಕಿನ ತೀವ್ರಗತಿಯ ಹರಡುವಿಕೆಯ ಹಿನ್ನೆಲೆಯಲ್ಲಿ, ಪೋಲ್ಯಾಂಡ್ ಭಾರತಕ್ಕೆ ವೈದ್ಯಕೀಯ ಸಹಾಯವನ್ನು ಕಳುಹಿಸಿಕೊಟ್ಟಿದೆ. ಪೋಲ್ಯಾಂಡ್‌ನಿಂದ  100 ಆಮ್ಲಜನಕ ಸಾಂದ್ರಕಗಳು ಶುಕ್ರವಾರ ನವದೆಹಲಿಗೆ ಬಂದಿಳಿದಿದೆ.

ಭಾರತದಲ್ಲಿ ವೈರಸ್ ಹರಡುವುದರಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ಎದುರಿಸಲು ಭಾರತಕ್ಕೆ ಮಾನವೀಯ ನೆರವು ನೀಡುವ ಭಾಗವಾಗಿ  ಪೋಲ್ಯಾಂಡ್ ಒಟ್ಟು 100 ಆಮ್ಲಜನಕ ಸಾಂದ್ರಕಗಳನ್ನು ಭಾರತಕ್ಕೆ ನೀಡಿದೆ.

ಇಂದು  ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರರು ಈ ಆಮ್ಲಜನಕ ಸಾಂದ್ರಕಗಳನ್ನು ಸ್ವೀಕರಿಸಿದ್ದಾಗಿ ಹೇಳಿದ್ದಾರೆ ಮತ್ತು ಪೋಲ್ಯಾಂಡ್‌ಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.‌

ಈ ಹಿಂದೆ ಯುರೋಪಿಯನ್ ಯೂನಿಯನ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ರಷ್ಯಾ, ಸೌದಿ ಅರೇಬಿಯಾ, ಚೀನಾ, ಸಿಂಗಾಪುರ್, ಭೂತಾನ್, ರೊಮೇನಿಯಾ ಸೇರಿದಂತೆ ಇನ್ನೂ ಅನೇಕ ರಾಷ್ಟ್ರಗಳು ಭಾರತಕ್ಕೆ ಹಲವು ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಸಂಗ್ರಹಿಸಲು, ಮೊಬೈಲ್ ಆಮ್ಲಜನಕ ಸ್ಥಾವರಗಳನ್ನು ಸಾಗಿಸಲು  ನೆರವು ನೀಡಲು ಮುಂದಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top