ಬೆಂಗಳೂರು: ದೇಶದಲ್ಲಿ ತಾಂಡವವಾಡುತ್ತಿರುವ ಕೋವಿಡ್ – 19 ಸಾಂಕ್ರಾಮಿಕ ರೋಗ ಅಪಾರ ಪ್ರಾಣಹಾನಿಯನ್ನುಂಟು ಮಾಡಿದೆ. ಸಹಾಯಕ್ಕೆ ಯಾರನ್ನೂ ಅಂಗಲಾಚಬೇಕು ಎನ್ನುವ ಪರಿಸ್ಥಿತಿ ಉದ್ಭವಿಸಿದೆ. ಈ ಸಂದರ್ಭದಲ್ಲಿ ಸಮಾಜಕ್ಕೆ ಸೇವೆ ನೀಡಲು ಹಲವಾರು ಸಂಘ ಸಂಸ್ಥೆಗಳು ಮುಂದೆ ಬಂದಿದೆ. ಭಾರತೀಯ ಮೂಲದ ಕೂ app ಸಹ ಸಾಮಾಜಿಕ ಮಾಧ್ಯಮದ ಮೂಲಕ ಕೊರೋನಾ ವಿರುದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿ ಭಾಗವಹಿಸುತ್ತಿದೆ.
ಕೂ ಆ್ಯಪ್ ಕೊರೋನಾ ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಸಿಲಿಂಡರ್ಗಳು ಮತ್ತು ಇತರ ಸಂಪನ್ಮೂಲಗಳ ಅಗತ್ಯತೆಗಳನ್ನು ಒದಗಿಸಲು ಸಹಾಯವಾಗುವಂತೆ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಸಂಭಾವ್ಯ ಪ್ಲಾಸ್ಮಾ ದಾನಿಗಳಿಗೆ ಹೆಚ್ಚಿನ ಗೋಚರತೆಗಾಗಿ ತಮ್ಮ ಪ್ರೊಫೈಲ್ ಚಿತ್ರಗಳಲ್ಲಿ ಬ್ಯಾಡ್ಜ್ಗಳನ್ನು ಪೋಸ್ಟ್ ಮಾಡಲು ಅನುಮತಿಸುತ್ತದೆ. ಆ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಕೂ ಆ್ಯಪ್ ಮಾಡುತ್ತಿದೆ.
ಹಾಗೆಯೇ ಲಸಿಕೆ ಲಭ್ಯತೆಯ ಬಗ್ಗೆ ಬಳಕೆದಾರರಿಗೆ ತಿಳಿಸುವ ಹೊಸ ವೈಶಿಷ್ಟ್ಯವನ್ನೂ ಕೂ ಆ್ಯಪ್ ಅಳವಡಿಸಿಕೊಂಡಿದೆ. ತನ್ನ ಪ್ಲಾಟ್ಫಾರ್ಮ್ನಲ್ಲಿ ಸುಮಾರು 60 ಲಕ್ಷ ಬಳಕೆದಾರರನ್ನು ಹೊಂದಿರುವ ಕೂ ಆ್ಯಪ್, ಎಲ್ಲಾ ಡೇಟಾಗಳನ್ನು ಒಂದೇ ವೇದಿಕೆಯಲ್ಲಿ ದೊರೆಯುವಂತೆ ಮಾಡುವ ಮೂಲಕ ಇತರರಿಗೆ ಮಾಹಿತಿಯನ್ನು ಹುಡುಕಲು ಸಹಕರಿಸುತ್ತಿದೆ.
ಈ ಸಂಬಂಧ ಕೂ ಆ್ಯಪ್ ಸಂಸ್ಥಾಪಕ ರಾಧಾಕೃಷ್ಣ ಅವರು ಮಾತನಾಡಿದ್ದು, ಲಸಿಕೆ ಲಭ್ಯತೆಯ ಮಾಹಿತಿಯನ್ನು ಸ್ವಯಂಚಾಲಿತಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಬಳಕೆದಾರರ ಪ್ರೊಫೈಲ್ ಚಿತ್ರಗಳನ್ನು ತಮ್ಮ ರಕ್ತದ ಗುಂಪಿನ ಮಾಹಿತಿಯೊಂದಿಗೆ ಪ್ರಸ್ತುತ ಪಡಿಸಲು ಅವಕಾಶ ನೀಡಲಾಗಿದೆ. ರಕ್ತ ಅಥವಾ ಪ್ಲಾಸ್ಮಾವನ್ನು ದಾನ ಮಾಡಲು ಪ್ರೇರೇಪಿಸುವ ಹಿನ್ನೆಲೆಯಲ್ಲಿ ನಾವು ಕೆಲವು ವಿಶೇಷ ಬ್ಯಾಡ್ಜ್ಗಳನ್ನು ನೀಡಿದ್ದೇವೆ. ಇದರಿಂದ ಅಗತ್ಯವಿರುವವರಿಗೆ ಸಹಾಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.