ಬೆಂಗಳೂರು: ಕೊರೋನಾ ಸೋಂಕಿನ ಲಕ್ಷಣಗಳಿದ್ದರೂ ವರದಿಯಲ್ಲಿ ನೆಗೆಟಿವ್ ಬಂದಿದ್ದರೆ, ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುವ ಮೂಲಕ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಒಂದು ಬಾರಿ ಸಿಟಿ ಸ್ಕ್ಯಾನ್ ಮಾಡಿಸಿಕೊಂಡಲ್ಲಿ ಕ್ಯಾನ್ಸರ್ನಂತಹ ಕಾಯಿಲೆಗಳು ಇದ್ದರೆ ಕಾಣಿಸಿಕೊಳ್ಳಲಾರದು ಎಂದು ವಿಕಿರಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ಬಾರಿ ಸಿಟಿ ಸ್ಕ್ಯಾನ್ ಮಾಡುವುದೆಂದರೆ 300 ಬಾರಿ ಎಕ್ಸ್ರೇ ಮಾಡಿಸುವುದಕ್ಕೆ ಸಮ. ಪದೇ ಪದೇ ಸಿಟಿ ಸ್ಕ್ಯಾನ್ ಮೊರೆ ಹೋದಲ್ಲಿ ಕ್ಯಾನ್ಸರ್ಗೆ ಆಹ್ವಾನ ನೀಡಿದಂತೆ ಎಂದು ತಜ್ಞರು ಹೇಳಿದ್ದಾರೆ. ನಿರಂತರ ಸಿಟಿ ಸ್ಕ್ಯಾನ್ನಿಂದ ಭವಿಷ್ಯದಲ್ಲಿ ಸಮಸ್ಯೆ ಎದುರಾಗುವ ಅಪಾಯ ಇದೆ. ಆದ್ದರಿಂದ ಕೊರೋನಾ ಸೋಂಕು ಪತ್ತೆಗೆ ಈ ವಿಧಾನವನ್ನು ಅಂತಿಮ ಆಯ್ಕೆ ಎಂಬಂತೆ ಬಳಸಿಕೊಳ್ಳಬೇಕು ಎಂದು ತಜ್ಞರು ಕಿವಿಮಾತು ಹೇಳಿದ್ದಾರೆ.
ರಕ್ತದಲ್ಲಿನ ಆಕ್ಸಿಜನ್ ಪ್ರಮಾಣ 94 ಕ್ಕಿಂತ ಕಡಿಮೆ ಇದ್ದಾಗ, ಸೋಂಕಿನ ಲಕ್ಷಣಗಳು ತೀವ್ರ ಸ್ವರೂಪ ಪಡೆದಾಗ ಈ ಆಯ್ಕೆ ಮಾಡಬಹುದು. ಅನಗತ್ಯ ಸಿಟಿ ಸ್ಕ್ಯಾನ್ ಅಪಾಯಕಾರಿ. ಇದೇ ಕಾರಣಕ್ಕೆ ಗರ್ಭಿಣಿಯರಿಗೆ, ಮಕ್ಕಳಿಗೆ ಸಿಟಿ ಸ್ಕ್ಯಾನ್ ಮಾಡುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ವೈದ್ಯರ ಮಾರ್ಗದರ್ಶನ ಇಲ್ಲದೆ ಸಿಟಿ ಸ್ಕ್ಯಾನ್ ಸೂಕ್ತವಲ್ಲ ಎಂದು ವಿಕಿರಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.