ನವದೆಹಲಿ: ಕೋವಿಡ್-19 ವಿರುದ್ಧದ ಹೋರಾಟವನ್ನು ಬೆಂಬಲಿಸಲು ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ ಪ್ರಮುಖ ವೈದ್ಯಕೀಯ ಸಾಮಗ್ರಿಗಳನ್ನು ನೀಡುತ್ತಲಿದೆ, ಅಮೆರಿಕದಿಂದ 1.25 ಲಕ್ಷ ಬಾಟಲುಗಳ ರೆಮ್ಡೆಸಿವಿರ್ ಔಷಧ ನಿನ್ನೆ ಭಾರತಕ್ಕೆ ಬಂದಿಳಿದಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಅವರು ಅಮೆರಿಕದಿಂದ ನಾಲ್ಕನೇ ವಿಮಾನವು 1.25 ಲಕ್ಷ ಬಾಟಲುಗಳನ್ನು ರೆಮ್ಡೆಸಿವಿರ್ ಹೊತ್ತುಕೊಂಡು ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಅವರು ಅಮೆರಿಕಾದ ಈ ಬೆಂಬಲವನ್ನು ಸ್ವಾಗತಿಸಿದ್ದಾರೆ.
ಶನಿವಾರ ರಾತ್ರಿ, 1,000 ಆಮ್ಲಜನಕ ಸಿಲಿಂಡರ್ಗಳು, ರೆಗ್ಯಲೇಟರ್ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಹೊತ್ತ ಅಮೆರಿಕದಿಂದ ವಿಮಾನ ಭಾರತಕ್ಕೆ ಬಂದಿಳಿದಿದೆ. ಕಳೆದ ಶುಕ್ರವಾರ, ಕ್ಯಾಲಿಫೋರ್ನಿಯಾ ದಾನ ಮಾಡಿದ ಆಮ್ಲಜನಕ ಸಿಲಿಂಡರ್ಗಳು, ರೆಗ್ಯಲೇಟರ್ ಮತ್ತು ಪಲ್ಸ್ ಆಕ್ಸಿಮೀಟರ್ಗಳು ಮತ್ತು ರ್ಯಾಪಿಡ್ ಡಯಾಗ್ನೋಸ್ಟಿಕ್ ಟೆಸ್ಟ್ಗಳು ಮತ್ತು ಎನ್ 95 ಮುಖಗವಸುಗಳು ಸೇರಿದಂತೆ ಆರಂಭಿಕ ತುರ್ತು ಪರಿಹಾರ ಸಾಮಗ್ರಿಗಳನ್ನು ತುಂಬಿಸಿ ಯುಎಸ್ ತನ್ನ ಮೊದಲ ಎರಡು ವಿಮಾನಗಳನ್ನು ಭಾರತಕ್ಕೆ ಕಳುಹಿಸಿದೆ.
ತಕ್ಷಣದ ತುರ್ತು ಕೋವಿಡ್-19 ಸಹಾಯದಡಿಯಲ್ಲಿ, ವಾಷಿಂಗ್ಟನ್ 1700 ಆಮ್ಲಜನಕ ಸಾಂದ್ರಕಗಳನ್ನು, 1,100 ಸಿಲಿಂಡರ್ಗಳ ಆರಂಭಿಕ ವಿತರಣೆಯನ್ನು, ತಲಾ 20 ರೋಗಿಗಳನ್ನು ಬೆಂಬಲಿಸಲು ಬಹು ದೊಡ್ಡ ಪ್ರಮಾಣದ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಭಾರತಕ್ಕೆ ಒದಗಿಸುತ್ತಿದೆ.
🇮🇳 🇺🇸
4th flight from U.S.A. arrives carrying 1.25 lakh vials of Remdesivir. Welcome this support from 🇺🇸. pic.twitter.com/QV84PwvgCD— Arindam Bagchi (@MEAIndia) May 2, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.