ಜಕಾರ್ತ: 54 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ವಿಮಾನವೊಂದು ಭಾನುವಾರ ಇಂಡೋನೇಷ್ಯಾದ ದಟ್ಟ ಕಾನನ ಮತ್ತು ಪರ್ವತ ಪ್ರದೇಶವಾದ ಪಪುವಾದಲ್ಲಿ ಪತನಕ್ಕೀಡಾಗಿದೆ.
ತ್ರಿಗಣ ಹೆಸರಿನ ವಿಮಾನ ಇದಾಗಿದ್ದು, ಇಂಡೋನೇಷ್ಯಾದ ಜಯಪುರದ ಸೆಂತಣಿ ಏರ್ಪೋರ್ಟ್ನಿಂದ ಪಪುವಾ ರಾಜ್ಯದ ರಾಜಧಾನಿ ಓಕ್ಸಿಬಲ್ ಏರ್ಪೋರ್ಟ್ಗೆ ಪ್ರಯಾಣ ಬೆಳೆಸಿತ್ತು. ಆದರೆ ಮಾರ್ಗ ಮಧ್ಯೆ ಪತನಕ್ಕೀಡಾಗಿದೆ. ಅಲ್ಲಿನ ಸ್ಥಳೀಯರು ಪತನದ ಮಾಹಿತಿಯನ್ನು ನೀಡಿದ್ದಾರೆ.
ಇದರಲ್ಲಿ 44 ವಯಸ್ಕರು, 5 ಮಕ್ಕಳು ಮತ್ತು 5 ಸಿಬ್ಬಂದಿಗಳು ಇದ್ದರು, ಯಾರಬ್ಬರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ವಾತಾವರಣ ತುಂಬಾ ಪ್ರತಿಕೂಲವಾಗಿರುವುದರಿಂದ ರಕ್ಷಣಾ ಕಾರ್ಯವೂ ಕಷ್ಟವಾಗಿದೆ.
ಅಗ್ನೇಯ ಏಷ್ಯಾ ರಾಷ್ಟ್ರಗಳ ವಿಮಾನ ದುರಂತ ಸರಣಿಗೆ ಇದೊಂದು ಹೊಸ ಸೇರ್ಪಡೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.