News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿದೇಶಗಳಿಂದ ಆಮ್ಲಜನ, ವೈದ್ಯಕೀಯ ಉಪಕರಣ ತರಲು 7 ನೌಕಾ ಹಡಗು ನಿಯೋಜನೆ

ನವದೆಹಲಿ: ಕೋವಿಡ್‌-19 ವಿರುದ್ಧದ ರಾಷ್ಟ್ರದ ಹೋರಾಟಕ್ಕೆ ಬೆಂಬಲವಾಗಿ ಮತ್ತು ‘ಸಮುದ್ರ ಸೇತು 2’ ಕಾರ್ಯಾಚರಣೆಯ ಭಾಗವಾಗಿ, ಕೋಲ್ಕತಾ, ಕೊಚ್ಚಿ, ತಲ್ವಾರ್, ತಬಾರ್, ತ್ರಿಖಂಡ್, ಜಲಾಶ್ವ ಮತ್ತು ಐರಾವತ್ ಸೇರಿದಂತೆ ಏಳು ಭಾರತೀಯ ನೌಕಾ ಹಡಗುಗಳನ್ನು ದ್ರವ ವೈದ್ಯಕೀಯ ಆಮ್ಲಜನಕ, ಕ್ರಯೋಜೆನಿಕ್ ಕಂಟೇನರ್ ಮತ್ತು ವಿವಿಧ ದೇಶಗಳಿಂದ ವೈದ್ಯಕೀಯ ಉಪಕರಣಗಳನ್ನು ಸಾಗಾಣೆ ಮಾಡಲು ನಿಯೋಜಿಸಲಾಗಿದೆ.

ಪರ್ಷಿಯನ್ ಕೊಲ್ಲಿಯಲ್ಲಿ ನಿಯೋಜಿಸಲಾದ ಐಎನ್ಎಸ್ ಕೋಲ್ಕತಾ ಮತ್ತು ಐಎನ್ಎಸ್ ತಲ್ವಾರ್ ಎಂಬ ಮೊದಲ ಬ್ಯಾಚ್ ಹಡಗುಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು,  ಏಪ್ರಿಲ್ 30 ರಂದು ಬಹ್ರೇನ್‌ನ ಮನಮಾ ಬಂದರಿಗೆ ಪ್ರವೇಶಿಸಿವೆ. 40 ಮೆಟ್ರಿಕ್ ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹೊತ್ತು ಐಎನ್ಎಸ್ ತಲ್ವಾರ್ ಭಾರತಕ್ಕೆ ಮರಳಲು ಪ್ರಾರಂಭಿಸಿದೆ.

ಐಎನ್‌ಎಸ್ ಕೋಲ್ಕತಾ ವೈದ್ಯಕೀಯ ಸಾಮಗ್ರಿಗಳನ್ನು ತರಲು ಕತಾರ್‌ನ ದೋಹಾಕ್ಕೆ ತೆರಳಿ ತರುವಾಯ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್‌ಗಳನ್ನು ತರಲು ಕುವೈಟ್‌ಗೆ ತೆರಳಿದೆ.

ನೌಕಾಪಡೆಯು ಕಳೆದ ವರ್ಷ ಪ್ರಾರಂಭಿಸಿದ ಆಪರೇಷನ್ ಸಮುದ್ರ ಸೇತು ಮೊದಲ ಹಂತದಲ್ಲಿ, ಕೋ ವಿಡ್- 19  ಮಧ್ಯೆ ನೆರೆಯ ದೇಶಗಳಲ್ಲಿ ಸಿಲುಕಿಕೊಂಡಿದ್ದ ಸುಮಾರು 4 ಸಾವಿರ ಭಾರತೀಯ ನಾಗರಿಕರನ್ನು ಯಶಸ್ವಿಯಾಗಿ ಭಾರತಕ್ಕೆ ವಾಪಸ್ ಕರೆ ತಂದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top