ಭೋಪಾಲ್: ಮಧ್ಯಪ್ರದೇಶದ ಆಡಳಿತ ರೂಢ ಬಿಜೆಪಿಯನ್ನು ವ್ಯಾಪಮ್ ಹಗರಣದಲ್ಲಿ ಸಿಲುಕಿಸಲು ಕಾಂಗ್ರೆಸ್ ಭಾರೀ ಪ್ರಯತ್ನಗಳನ್ನು ನಡೆಸಿತ್ತು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರ ರಾಜೀನಾಮೆಗೂ ಪಟ್ಟು ಹಿಡಿದಿತ್ತು.
ಆದರೆ ಇತ್ತೀಚಿಗೆ ನಡೆದ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಅಭುತಪೂರ್ವ ಯಶಸ್ಸನ್ನು ದಾಖಲಿಸುವ ಮೂಲಕ ತನ್ನ ವಿರುದ್ಧ ಆರೋಪ ಮಾಡಿದ ಪಕ್ಷಗಳಿಗೆ ತಿರುಗೇಟು ನೀಡಿದೆ.
16 ಮುನ್ಸಿಪಲ್ ಕಾರ್ಪೋರೇಶನ್ಗಳಲ್ಲಿ 16ನ್ನೂ ಗೆದ್ದು ಬಿಜೆಪಿ ಬೀಗಿದೆ. ಇದು ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ದೊರೆತ ಐತಿಹಾಸಿಕ ಮಹಾ ಗೆಲುವೆಂದೇ ಬಣ್ಣಿಸಲಾಗಿದೆ. ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದವರು ಇದೀಗ ಮೌನಕ್ಕೆ ಶರಣಾಗುವುದು ಅನಿವಾರ್ಯವಾಗಿದೆ.
‘ರಾಜ್ಯದ ಎಲ್ಲಾ 16 ಕಾರ್ಪೋರೇಶನ್ಗಳನ್ನು ಇದೇ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ. ಇದು ಜನರ ಯಶಸ್ಸು, ಅವಮಾನ ಮಾಡುವುದು ರಾಜಕೀಯದಲ್ಲಿ ಸಹಾಯಕ್ಕೆ ಬರುವುದಿಲ್ಲ ಎಂಬುದನ್ನು ಇನ್ನಾದರು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು’ ಎಂದು ಚೌವ್ಹಾಣ್ ಹೇಳಿದ್ದಾರೆ.
ಅಲ್ಲದೇ ಬಿಜೆಪಿಯ ಗೆಲುವನ್ನು ಅವರು ಪ್ರಧಾನಿಯವರಿಗೆ ಅರ್ಪಿಸಿದ್ದಾರೆ, ಇದು ಪ್ರಧಾನಿಯ ಯೋಜನೆಗಳಿಗೆ ದೊರೆತ, ಬಿಜೆಪಿ ಸಿದ್ಧಾಂತಗಳಿಗೆ ದೊರೆತ ಜಯ ಎಂದಿದ್ದಾರೆ. ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರೂ ಮಧ್ಯಪ್ರದೇಶ ಬಿಜೆಪಿಯ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.