ಚಿಕ್ಕಮಗಳೂರು: ಜಿಲ್ಲೆಯಲ್ಲಿನ 800 ವರ್ಷ ಹಳೆಯ, ಶಿಥಿಲಾವಸ್ಥೆಗೆ ತಲುಪಿರುವ ದೇವಾಲಯವನ್ನು ಮರುನವೀಕರಣಗೊಳಿಸುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಹಳೆಯ ಲಕ್ಯಾದಲ್ಲಿರುವ ಶ್ರೀ ಚೆನ್ನಕೇಶವ ದೇವಾಲಯವನ್ನು ದತ್ತು ಪಡೆದಿದ್ದು, ಆ ಮೂಲಕ 800 ವರ್ಷ ಹಳೆಯ ದೇಗುಲವನ್ನು ಪುನರ್ನವೀಕರಣ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯ ಪೊದೆಗಳಿಂದ ಆವೃತವಾಗಿರುವ ಈ ದೇವಾಲಯ ಅಜೀರ್ಣಾವಸ್ಥೆಯಲ್ಲಿದ್ದು ಹೊಯ್ಸಳರ ಕಾಲಕ್ಕೆ ಸೇರಿದ್ದಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹೊಯ್ಸಳರ ಕಾಲಕ್ಕೆ ಸೇರಿದ ಹಳೆಯ ಲಕ್ಯಾದಲ್ಲಿರುವ ಶ್ರೀ ಚೆನ್ನಕೇಶವ ದೇಗುಲ ಶಿಥಿಲಾವಸ್ಥೆಯಲ್ಲಿದೆ. ಆ ದೇವಾಲಯವನ್ನು ಪುನರ್ನವೀಕರಣ ಮಾಡುವುದು, ಅದರ ವೈಭವವನ್ನು ಮರಳಿ ಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿದ್ದು, ಇದಕ್ಕೆ ಸರ್ಕಾರ, ಸಂಸ್ಥೆಗಳು, ವ್ಯಕ್ತಿಗಳು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
Sri Channakeshava Temple at Old Lakya, Chikkamagaluru of Hoysala Era is in a highly dilapidated condition.
I have embarked on a Mission to restore the Temple to its original glory.
I seek the support of Govt, Individuals & Organisations to fulfill this Mission.#ReclaimTemples pic.twitter.com/cxSxMWbnT6
— C T Ravi 🇮🇳 ಸಿ ಟಿ ರವಿ (@CTRavi_BJP) April 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.