ನವದೆಹಲಿ: 1.5GW ಸಾಮರ್ಥ್ಯ ಹೊಂದಿರುವ ಸೌದಿ ಅರೇಬಿಯಾದ ಅತಿ ದೊಡ್ಡ ಸೌರ ಸ್ಥಾವರ – ಸುಡೈರ್ ಸೌರ ಪಿವಿ ಯೋಜನೆಯನ್ನು ನಿರ್ಮಿಸುವ ಒಪ್ಪಂದವನ್ನು ಲಾರ್ಸೆನ್ ಮತ್ತು ಟೌಬ್ರೊ ಗೆದ್ದುಕೊಂಡಿದೆ. ಎಲ್ & ಟಿಯ ನವೀಕರಿಸಬಹುದಾದ ಇಂಧನದ ಅಂಗಸಂಸ್ಥೆಗೆ ಈ ಯೋಜನೆಯನ್ನು ನೀಡಲಾಗಿದೆ.
ಒಪ್ಪಂದದ ಮೌಲ್ಯ ಸುಮಾರು 5000-7000 ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ.
ಸೌದಿಯ ಸಾರ್ವಜನಿಕ ಹೂಡಿಕೆ ನಿಧಿಯ (ಪಿಐಎಫ್) ಅಂಗಸಂಸ್ಥೆಯಾದ ಎಸಿಡಬ್ಲ್ಯೂಎ ಪವರ್ ಮತ್ತು ವಾಟರ್ ಅಂಡ್ ಎಲೆಕ್ಟ್ರಿಸಿಟಿ ಹೋಲ್ಡಿಂಗ್ ಕಂಪನಿಯ ಒಕ್ಕೂಟವು ಈ ಒಪ್ಪಂದವನ್ನು ನೀಡಿದೆ.
ಒಪ್ಪಂದವು ಇಪಿಸಿ (ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ) ಪ್ರಕಾರದದ್ದಾಗಿದ್ದು, ಸೌದಿಯ ರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಕಾರ್ಯಕ್ರಮದ (ಎನ್ಆರ್ಇಪಿ) ಭಾಗವಾಗಿರುವ ಈ ಯೋಜನೆಯನ್ನು ರಿಯಾದ್ ಪ್ರಾಂತ್ಯದಲ್ಲಿ ಸ್ಥಾಪಿಸಲಾಗುತ್ತಿದೆ.
ಲಭ್ಯವಿರುವ 30.8 ಚದರ ಕಿಲೋಮೀಟರ್ ಲ್ಯಾಂಡ್ ಪಾರ್ಸೆಲ್ನಲ್ಲಿ 1.5 ಜಿಡಬ್ಲ್ಯೂ ಪಿವಿ ಸೌರ ಮಾಡ್ಯೂಲ್ಗಳು ಮತ್ತು ಸಂಯೋಜಿತ ಸಿಂಗಲ್ ಆಕ್ಸಿಯಾಲ್ ಟ್ರ್ಯಾಕರ್ ಮತ್ತು ಇನ್ವರ್ಟರ್ಗಳನ್ನು ಸ್ಥಾಪಿಸಲಾಗುತ್ತದೆ. ಎಲ್ & ಟಿ ಅಭಿವೃದ್ಧಿಪಡಿಸಲು ನಿಗದಿಪಡಿಸಿರುವ ಈ ನಿರ್ದಿಷ್ಟ ಯೋಜನೆಯು ಪಿಐಎಫ್ಗೆ ಹಂಚಿಕೆಯಾಗಿರುವ ಸೌದಿ ಸಾಮ್ರಾಜ್ಯದ 58.7 ಜಿವ್ಯಾಟ್ನ ಶೇಕಡಾ 70 ರಷ್ಟು ಗುರಿ ಸಾಮರ್ಥ್ಯದ ಒಂದು ಭಾಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.