ನವದೆಹಲಿ: ಒಂದು ಪ್ರಮುಖ ಬೆಳವಣಿಗೆಯಲ್ಲಿ, ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಕಾಶಿ ವಿಶ್ವನಾಥ ದೇವಾಲಯ-ಜ್ಞಾನವಪಿ ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ನಡೆಸಲಿ ಭಾರತದ ಪುರಾತತ್ವ ಇಲಾಖೆಗೆ ಅನುಮತಿಯನ್ನು ನೀಡಿದೆ.
ಸಮೀಕ್ಷೆಯ ವೆಚ್ಚವನ್ನು ಭರಿಸಬೇಕೆಂದು ನ್ಯಾಯಾಲಯವು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
“ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ಕಾಶಿ ವಿಶ್ವನಾಥ ದೇವಾಲಯ-ಜ್ಞಾನಪೂತಿ ಮಸೀದಿ ಸಂಕೀರ್ಣದ ಸಮೀಕ್ಷೆಗಾಗಿ ವಾರಣಾಸಿ ನ್ಯಾಯಾಲಯವು ಮುಂದಾಗಿದೆ; ಸಮೀಕ್ಷೆಯ ವೆಚ್ಚವನ್ನು ಯುಪಿ ಸರ್ಕಾರ ಭರಿಸಲಿದೆ” ಎಂದು ಸುದ್ದಿಸಂಸ್ಥೆ ಟ್ವಿಟ್ ಮಾಡಿದೆ.
ಕಾಶಿಯ ಜ್ಞಾನವಾಪಿ ಮಸೀದಿ ಭೂಮಿ ಕಾಶಿ ವಿಶ್ವನಾಥ ದೇಗುಲಕ್ಕೆ ಸೇರಿದ್ದು ಮತ್ತು ಆ ಭೂಮಿಯನ್ನು ದೇಗುಲಕ್ಕೆ ಹಸ್ತಾಂತರಿಸಬೇಕು ಎಂದು ವಕೀಲರೊಬ್ಬರು 2019 ರಲ್ಲಿ ಸಲ್ಲಿಸಿದ್ದ ಅರ್ಜಿಗೆ ಸಂಬಂದಿಸಿದಂತೆ ಈ ಆದೇಶ ನೀಡಲಾಗಿದೆ. ಇಲ್ಲಿನ ಸ್ಥಳೀಯ ನ್ಯಾಯಾಲಯ ಅರ್ಜಿ ವಿಚಾರಣೆ ವೇಳೆ ಜ್ಞಾನವಾಪಿ ಮಸೀದಿ ಸಮುಚ್ಚಯವನ್ನು ಎ.ಎಸ್.ಐ ಮೂಲಕ ಸರ್ವೇ ನಡೆಸುವಂತೆ ಸೂಚಿಸಿದೆ.
A Varanasi Court gives a go-ahead for survey of Kashi Vishwanath Temple-Gyanvapi Mosque complex by Archaeological Survey of India; UP government to bear the cost of the survey
— ANI UP (@ANINewsUP) April 8, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.