ನವದೆಹಲಿ: ವಿಶ್ವದ ಅತೀದೊಡ್ಡ ಕೊರೋನಾ ಲಸಿಕಾ ಅಭಿಯಾನ ನಡೆಸುತ್ತಿರುವ ಭಾರತ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ದೇಶದಲ್ಲಿ ಇದುವರೆಗೆ ನೀಡಲಾದ ಕೋವಿಡ್-19 ಲಸಿಕೆ ಡೋಸ್ಗಳ ಒಟ್ಟು ಸಂಖ್ಯೆ 8.40 ಕೋಟಿ ದಾಟಿದೆ. ನಿನ್ನೆ ಒಂದೇ ದಿನ ರಾತ್ರಿ 8 ಗಂಟೆಯವರೆಗೆ 5.62 ಲಕ್ಷ ಲಸಿಕೆ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರಲ್ಲಿ 4.57 ಲಕ್ಷ ಫಲಾನುಭವಿಗಳಿಗೆ 1 ನೇ ಡೋಸ್ ಲಸಿಕೆ ನೀಡಲಾಯಿತು ಮತ್ತು 1.5 ಲಕ್ಷ ಫಲಾನುಭವಿಗಳು 2 ನೇ ಡೋಸ್ ಲಸಿಕೆ ಪಡೆದರು ಎಂದು ಮಾಹಿತಿ ನೀಡಿದೆ.
ಇದುವರೆಗೆ ದೇಶದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಮೂರು ಕೋಟಿ 44 ಲಕ್ಷ ಫಲಾನುಭವಿಗಳಿಗೆ ಮೊದಲ ಡೋಸ್ ನೀಡಲಾಗಿದೆ ಮತ್ತು ಎಂಟು ಲಕ್ಷ 61 ಸಾವಿರ ಫಲಾನುಭವಿಗಳಿಗೆ ಇಲ್ಲಿಯವರೆಗೆ 2 ನೇ ಡೋಸ್ ನೀಡಲಾಗಿದೆ.
ಈ ವರ್ಷದ ಜನವರಿ 16 ರಂದು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಅನ್ನು ದೇಶಾದ್ಯಂತ ಆರಂಭಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.